ಅತಿಥಿ ಉಪನ್ಯಾಸಕ ವೇತನ ಹೆಚ್ಚಳ ಮಾಡದ BJP ಸರ್ಕಾರ ಖೈದಿಗಳ ಭತ್ಯೆಯನ್ನು 3 ಪಟ್ಟು ಹೆಚ್ಚಿಸಿದೆ: ಕಾಂಗ್ರೆಸ್ ಆರೋಪ

Update: 2022-12-28 17:56 GMT

ಬೆಂಗಳೂರು, ಡಿ.28:  ಕಾರಾಗೃಹಗಳಲ್ಲಿ ಇರುವ ಖೈದಿಗಳಿಗೆ ನೀಡುತ್ತಿರುವ ಭತ್ಯೆಯನ್ನು ರಾಜ್ಯ ಸರ್ಕಾರ 3 ಪಟ್ಟು ಹೆಚ್ಚಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ' ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಸಾರಿಗೆ ನೌಕರರು, ಇವರೆಲ್ಲ ಹೋರಾಟ ಮಾಡಿದರೂ ವೇತನ ಹೆಚ್ಚಳ ಮಾಡದ ಬಿಜೆಪಿ ಸರ್ಕಾರ ಖೈದಿಗಳ ಭತ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದೆ! ಹೊರಗೆ ರೌಡಿಗಳಿಗೆ ಮಣೆ, ಜೈಲೊಳಗಿನ ಖೈದಿಗಳಿಗೆ ಮನ್ನಣೆ, ಇದು ಬಿಜೆಪಿಯ ಕ್ರಿಮಿನಲ್‌ಗಳ ಮೇಲಿನ ಪ್ರೇಮ' ಎಂದು ಕಾಂಗ್ರೆಸ್ ಕಿಡಿಕಾರಿದೆ. 

''ಅತಿಥಿ ಶಿಕ್ಷಕರನ್ನು ಅನಾಥ ಶಿಕ್ಷಕರನ್ನಾಗಿಸಿದೆ ಭ್ರಷ್ಟ ಬಿಜೆಪಿ ಸರ್ಕಾರ. ಜೈಲಿನ ಖೈದಿಗಳ ಭತ್ಯೆ ಏರಿಕೆ ಮಾಡುವ ಸರ್ಕಾರಕ್ಕೆ ಅತಿಥಿ ಶಿಕ್ಷಕರಿಗೆ ಸಮರ್ಪಕ ವೇತನ ನೀಡುವ ಮನಸ್ಸಿಲ್ಲ. ಬಿಜೆಪಿ ಸರ್ಕಾರದಿಂದ ಕಂಗೆಟ್ಟವರು ಕಾಂಗ್ರೆಸ್ ರೂಪಿಸಿದ ನರೇಗಾ ಯೋಜನೆಯ ಆಸರೆ ಪಡೆದಿದ್ದಾರೆ. ಇದು ನಮ್ಮ ಜನಪರ ನೀತಿಯ ಸಾರ್ಥಕತೆಗೆ ಸಾಕ್ಷಿ'' ಎಂದು ಕಾಂಗ್ರೆಸ್ ಹೇಳಿದೆ. 

Similar News