ತಲಾ 25 ಕೋಟಿ ರೂ. ಅನುದಾನಕ್ಕೆ ಬೇಡಿಕೆ: 58 ಪರಿಷತ್ತು ಸದಸ್ಯರು ಸಹಿ

Update: 2022-12-29 17:44 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.29: ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿಕಾರ್ಯ ಬಳಕೆಗೆ ರಾಜ್ಯ ಸರಕಾರ ವಿಧಾನಪರಿಷತ್ತು ಸದಸ್ಯರಿಗೆ ತಲಾ 25 ಕೋಟಿರೂ. ಅನುದಾನ ಮೀಸಲಿಡಬೇಕು ಎನ್ನುವ ಬೇಡಿಕೆಗೆ 58 ಸದಸ್ಯರು ಸಹಿ ಹಾಕಿದ್ದಾರೆ.

ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ಹುಕ್ಕೇರಿ, ಸರಕಾರ ಪರಿಷತ್ತು ಸದಸ್ಯರಿಗೆ ತಲಾ 25 ಕೋಟಿರೂ., ಮೀಸಲಿಡಬೇಕು. ಈ ಸಂಬಂಧ ನಾವು ಸಲ್ಲಿಸಲಿರುವ ಮನವಿ ಪತ್ರಕ್ಕೆ ಈಗಾಗಲೇ 58 ಸದಸ್ಯರು ಸಹಿ ಹಾಕಿದ್ದಾರೆಂದು ಸದನದ ಗಮನ ಸೆಳೆದರು.

ಸದಸ್ಯರಿಗೆ ನೀಡುವ ಅನುದಾನದಲ್ಲಿ ಆಯಾ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಚಟುವಟಿಕೆಗಳು ನಡೆಯಲಿವೆ. ಇದರಿಂದ ನಾವು ಜನಕ್ಕೆ ಏನಾದರೂ ಮಾಡುತ್ತಿದ್ದೇವೆ ಎನ್ನುವ ನಂಬಿಕೆ ಬರಲಿದೆ ಎಂದರು.

Similar News