ಪುರುಷ ಅಧಿಕಾರಿ, ನೌಕರರಿಗೂ ಶಿಶುಪಾಲನಾ ರಜೆ: ಸಚಿವ ಮಾಧುಸ್ವಾಮಿ

Update: 2022-12-29 18:20 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.29: ಸರಕಾರಿ ಪುರುಷ ಅಧಿಕಾರಿ, ನೌಕರರಿಗೂ ಶಿಶುಪಾಲನಾ ರಜೆ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಹಿರಿಯ ಸದಸ್ಯ ನಸೀರ್ ಅಹ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪತ್ನಿ ನಿಧನ ಹೊಂದಿರುವ ಸರಕಾರಿ ಪುರುಷ ಅಧಿಕಾರಿ ಹಾಗೂ ನೌಕರರಿಗೆ ಶಿಶುಪಾಲನಾ ರಜೆ ಅನ್ವಯಿಸುವುದಿಲ್ಲ. ಆದರೂ, ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳು ಸರಕಾರ ಬದ್ಧವಾಗಿದೆ ಎಂದು ಹೇಳಿದರು.

18 ವರ್ಷ ತಲುಪುವವರೆಗಿನ ಯಾವುದೇ ವಯಸ್ಸಿನ ಮಕ್ಕಳ ಆರೈಕೆಯ ಅಗತ್ಯತೆಯನ್ನು ನೀಗಿಸಲು ಅವಶ್ಯಕತೆಯನ್ನು ಮನಗಂಡು ಯಾವುದೇ ತಾರತಮ್ಯವಿಲ್ಲದೆ 18 ವರ್ಷ ತಲುಪುವವರೆಗಿನ ಎಲ್ಲ ಮಕ್ಕಳ ಆರೈಕೆಗಗಿ ಈ ರಜೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ.ಇನ್ನೂ, ಮಕ್ಕಳ ವಯೋಮಿತಿ ಆಧಾರದ ಮೇಲೆ ಪರಿಗಣಿಸಿ ರಜೆ ನಿಗದಿಪಡಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

Similar News