ಕೋಲಾರ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 4 ಕೋಟಿ 5 ಲಕ್ಷ ರೂ. ವಶ

ಕಾರಿನಳೊಗಡೆ 3 ಗೋಣಿ ಚೀಲದಲ್ಲಿತ್ತು ಕೋಟಿ ಕೋಟಿ ನಗದು!

Update: 2023-06-27 10:57 GMT

ಕೋಲಾರ , ಮೇ 4 : ಕೆಜಿಎಫ್ ಪೊಲೀಸರು ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿರುವ ಘಟನೆ ಗುರುವಾರ ವರದಿಯಾಗಿದೆ.  

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಬಳಿ ಇರುವ ರೆಸಾರ್ಟ್‌ ಒಂದರ ವಿಲ್ಲಾದಲ್ಲಿರಿಸಿದ್ದ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬವರಿಗೆ ಸೇರಿದ ವಿಲ್ಲಾ ಇದಾಗಿದ್ದು, ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದ ತಂಡ ದಾಳಿ ಮಾಡಿದೆ. 

ವಿಲ್ಲಾದಲ್ಲಿ ಪತ್ತೆಯಾದ ಹಣ ಮತದಾರರಿಗೆ ಹಂಚಲು ಸಂಗ್ರಹಿಸಿದ್ದೆನ್ನಲಾಗಿದ್ದು, ಬಂಗಾರಪೇಟೆ ಪಂಚಾಯತಿವಾರು ಹೆಸರು ಬರೆದು ಬಂಡಲ್ ಮಾಡಿರುವುದು ಪತ್ತೆಯಾಗಿದೆ.  ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರು ಬಿಟ್ಟು ಮಾಲಕ ರಮೇಶ್ ಪರಾರಿಯಾಗಿದ್ದಾನೆನ್ನಲಾಗಿದೆ. 

ಮೊದಲಿಗೆ ವಿಲ್ಲಾದಲ್ಲಿದ್ದ 2 ಕೋಟಿ 54 ಲಕ್ಷ ಹಾಗೂ ಕಾರಿನ ಬೀಗ ಒಡೆದ ವೇಳೆ ಕಾರಿನಲ್ಲಿ ಮೂರು ಗೋಣಿ ಚೀಲದಲ್ಲಿದ್ದ ಒಂದೂವರೆ ಕೋಟಿ ಹಣ ಪತ್ತೆಯಾಗಿದೆ.

ಇನ್ನೂ ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಮೊಕ್ಕಾಂ ಹೂಡಿದ್ದು, ಹಣವನ್ನು ಮೆಷಿನ್ ಮೂಲಕ ಲೆಕ್ಕ ಹಾಕಿದ್ದು, ಸ್ಥಳದಲ್ಲಿ ಚುನಾವಣಾ ಲೆಕ್ಕ ವೀಕ್ಷಕರು, ತಾಲೂಕು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನ ವಶಕ್ಕೆ ಪಡೆಯಲಾಗಿದೆ.

Similar News