ಜಿಎಸ್‍ಟಿ ಸಂಗ್ರಹ 10 ಸಾವಿರ ಕೋಟಿ ರೂ.ದಾಟಿದೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2023-01-04 17:36 GMT

ಬೆಂಗಳೂರು, ಜ. 4: ‘ರಾಜ್ಯದ ಜಿಎಸ್‍ಟಿ ಸಂಗ್ರಹ ಮೂರು ತಿಂಗಳಿನಿಂದ ಸತತವಾಗಿ 10ಸಾವಿರ ಕೋಟಿ ರೂ. ದಾಟುತ್ತಿದ್ದು, ಸದ್ಯ ಮಹಾರಾಷ್ಟ್ರಕ್ಕಿಂತ ಸ್ವಲ್ಪ ಹಿಂದೆ ಇದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಟ್ವೀಟ್ ಮಾಡಿರುವ ಅವರು, ‘ಈ ಸಕಾರಾತ್ಮಕ ಬೆಳವಣಿಗೆಯು ನಾವು ಬೆಳವಣಿಗೆಯ ಪಥದಲ್ಲಿದ್ದೇವೆ ಎನ್ನುವುದಕ್ಕೆ ನಿರ್ದಶನ. ಈ ಹಿಂದೆ ಇದ್ದಂತಹ ಕೋವಿಡ್ ಪ್ರೇರಿತ ಮಂದಗತಿಯ ಋಣಾತ್ಮಕ ಪ್ರಭಾವವನ್ನು ಮೀರಿ ರಾಷ್ಟ್ರೀಯ ಆರ್ಥಿಕತೆಯನ್ನು ಉತ್ತೇಜಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ’ ಎಂದು ಅವರು ಹೇಳಿದ್ದಾರೆ.

Similar News