ಆರಗ ಜ್ಞಾನೇಂದ್ರ, ಸಿಎಂ ಬೊಮ್ಮಾಯಿ ಪುತ್ರನ ಜೊತೆಗಿದ್ದ ಸ್ಯಾಂಟ್ರೋ ರವಿ ಫೋಟೊ ಹಂಚಿಕೊಂಡ ಕಾಂಗ್ರೆಸ್

Update: 2023-01-06 04:34 GMT

ಬೆಂಗಳೂರು, ಜ.5: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಕೆ.ಎಸ್​ ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿ 'ಬಿಜೆಪಿ ಸಚಿವರ ಜೊತೆ ಸಂಪರ್ಕ ಹೊಂದಿದ್ದಾನೆ' ಎಂಬ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಇದೀಗ ಕಾಂಗ್ರೆಸ್ @INCKarnataka ಸ್ಯಾಂಟ್ರೋ ರವಿ,  ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರನ ಜೊತೆಗಿದ್ದ ಫೋಟೊ ಟ್ವಟಿರ್ ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕರನ್ನು ತರಾಟೆಗೆ ತೆಗದುಕೊಂಡಿದೆ. 

"ಸಿಎಂ ನನಗೆ ಒನ್ ಟು ಒನ್ ಇದ್ದಾರೆ, ನನಗೆ 'ಸರ್' ಎಂದು ಕರೆಯುತ್ತಾರೆ" ಎಂದಿದ್ದಾನೆ ವೇಶ್ಯಾವಾಟಿಕೆ ದಂಧೆಯ ಆರೋಪಿ ಸ್ಯಾಂಟ್ರೋ ರವಿ. ಸಿಎಂ ಪುತ್ರ 'ಸ್ವೀಟ್ ಬ್ರದರ್'ಆಗಿ ಆತ್ಮೀಯತೆ ಹೊಂದಿರುವುದು ಆತನ ಹೇಳಿಕೆಗೆ ಪುರಾವೆ ಒದಗಿಸುತ್ತದೆ. ರಾಜಾರೋಷವಾಗಿ ವರ್ಗಾವಣೆ ಡೀಲ್ ಮಾಡುವ ಈತನೊಂದಿಗೆ ಬಸವರಾಜ ಬೊಮ್ಮಾಯಿ ಅವರಿಗಿರುವ ಸಂಬಂಧವೇನು? ಎಂದು ಪ್ರಶ್ನೆ ಮಾಡಿದೆ.

ಸ್ಯಾಂಟ್ರೋ ರವಿ ಈತ ಸಿಎಂ ಪುತ್ರನಿಗೆ ಆತ್ಮೀಯ, ಗೃಹಸಚಿವರಿಗೂ ಆತ್ಮೀಯ, ಬಹುತೇಕ ಸಚಿವರಿಗೂ ಆತ್ಮೀಯ. ವರ್ಗಾವಣೆ ದಂಧೆಯಲ್ಲಿನ ಈತನ ಆತ್ಮವಿಶ್ವಾಸಕ್ಕೆ ಸರ್ಕಾರದ ಪ್ರಭಾವಿಗಳ ಆತ್ಮೀಯತೆಯೇ ಕಾರಣವೇ? ಬಸವರಾಜ ಬೊಮ್ಮಾಯಿ ಅವರೇ, ತಮಗೆ ಈತನೊಂದಿಗಿರುವ ವ್ಯವಹರವೇನು?'' ಎಂದು ಪ್ರಶ್ನೆ ಮಾಡಿದೆ. 

''10 ವರ್ಷದಿಂದ ವೇಶ್ಯಾವಾಟಿಕೆ ದಂಧೆಯ ಪ್ರಕರಣಗಳಿರುವ ಸ್ಯಾಂಟ್ರೋ ರವಿಗೂ ಗೃಹಸಚಿವರ ಆರಗ ಜ್ಞಾನೇಂದ್ರ ಅವರಿಗೂ ಇರುವ ಆತ್ಮೀಯ ಸಂಬಂಧವೇನು? ಗೃಹ ಇಲಾಖೆಯ ವರ್ಗಾವಣೆಗೆ ಆತ ಸಚಿವರಿಗೆ ಯಾವ ರೀತಿ ಋಣ ತೀರಿಸುತ್ತಿದ್ದ? ಗೃಹಸಚಿವರೇ ಆತನ ದಂಧೆಯ ಹಿಂದಿನ ಶಕ್ತಿಯಾಗಿದ್ದರೆ? ಇಡೀ ಸರ್ಕಾರವೇ ಈತನ ಕೈಯ್ಯಲ್ಲಿದೆಯಂತೆ, ಇದು ಸಾಧ್ಯವಾಗಿದ್ದು ಹೇಗೆ?'' ಎಂದು ಕಾಂಗ್ರೆಸ್  ಟ್ವೀಟಿಸಿದೆ.

Similar News