ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯ ಫಲಕ ಅಳವಡಿಸುವಂತೆ ಸುತ್ತೋಲೆ
Update: 2023-01-13 13:28 GMT
ಬೆಂಗಳೂರು, ಜ.13: ಬೆಳಗಾವಿಯ ಚಿಕ್ಕಟ್ಟಿ ಕೃಷಿ ರೈತ ಉತ್ಪಾದಕ ಸಂಸ್ಥೆಯು ಸಿದ್ಧಪಡಿಸಿದ ಭಾರತ ಸಂವಿಧಾನ ಪೀಠಿಕೆಯ ಫಲಕವನ್ನು ಕಾಲೇಜಿನ ಅನುಧಾನದಲ್ಲಿ ಖರೀಧಿಸಿ, ರಾಜ್ಯದ ಎಲ್ಲ ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಅಳವಡಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ದೇಶದ ಪ್ರತಿಯೊಬ್ಬ ಪ್ರಜೆಯು ಭಾರತದ ಸಂವಿಧಾನದ ಆಶಯವನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಸಂಸ್ಥೆಯು ಸಿದ್ಧಪಡಿಸಿದ ಸಂವಿಧಾನದ ಪೀಠಿಕೆಯ ಫಲಕವನ್ನು ಅಳವಡಿಸುವಂತೆ ಕಾನೂನು ಇಲಾಖೆಯು ತಿಳಿಸಿದ್ದು, ಕಾಲೇಜುಗಳಲ್ಲಿ ಇದನ್ನು ಅನುಷ್ಠಾನ ಮಾಡಲು ಸೂಚಿಸಲಾಗಿದೆ.