ಉಡುಪಿ: ಅಲ್ ಇಬಾದಾಹ್ ಸ್ಕೂಲ್ ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನ

Update: 2023-01-14 14:40 GMT

ಉಡುಪಿ: ಪೆರಂಪಳ್ಳಿಯ ಅಲ್ ಇಬಾದಾಹ್ ಇಂಡಿಯನ್ ಸ್ಕೂಲ್‌ನ ಮೂರರಿಂದ ಏಳನೇ ತರಗತಿಯ ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನ ‘ಬೋಪಿನ್ಸ್’ನ್ನು ಜ.10ರಂದು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಪ್ರದರ್ಶನವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಉಡುಪಿ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನಭಾಗ್ ಮಾತನಾಡಿ, ವೈಜ್ಞಾನಿಕ ಅಧ್ಯಯನವನ್ನು ನೈತಿಕ ಅಧ್ಯಯನಗಳೊಂದಿಗೆ ಸಂಯೋಜಿಸುವ ಪರಿಕಲ್ಪನೆ ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಎರಡಕ್ಕೂ ಸಮಾನ ಪ್ರಾಮುಖ್ಯತೆ ನೀಡುವುದು ಮುಖ್ಯ ಎಂದು ತಿಳಿಸಿದರು.

ಶಿಕ್ಷಣ ತಜ್ಞ ಶೇಖ್ ಅಬ್ದುಲ್ ವಹೀದ್ ರಿಯಾಝಿ, ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ ವೈದ್ಯಕೀಯ ನಿರ್ದೇಶಕಿ ಡಾ.ರಿಜ್ವಾನ್ ಅಹ್ಮದ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಶಾಲತಾ, ಉಡುಪಿ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ರುಖ್ಸಾರ್ ಅಂಜುಮ್ ಮಾತನಾಡಿದರು.

ಮುಹಮ್ಮದ್ ಯಾಸೀನ್ ಮಲ್ಪೆ, ಡಾ.ಶಾನವಾಝ್ ತೋನ್ಸೆ, ಡಾ. ಶಾಜಹಾನ್ ತೋನ್ಸೆ, ಧನಲಕ್ಷ್ಮಿ, ಫೈಸಲ್ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಅಲ್-ಇಬಾದಾ ಇಂಡಿಯನ್ ಸ್ಕೂಲ್‌ನ ಸಹಸಂಸ್ಥಾಪಕ ಶೈಖ್ ಅಬ್ದುಲ್ ಲತೀಫ್ ಮದನಿ ಸ್ವಾಗತಿಸಿದರು.

ಶಿಕ್ಷಕರು ಮತ್ತು ಪೋಷಕರ ಸ್ಫೂರ್ತಿ, ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ವಿದ್ಯಾರ್ಥಿಗಳು ವಿಭಿನ್ನ ವಿಜ್ಞಾನದ ಮಾದರಿಗಳು ಮತ್ತು ಪ್ರಯೋಗಗಳನ್ನು ಅತ್ಯಂತ ಉತ್ಸಾಹದಿಂದ ಪ್ರದರ್ಶಿಸಿದರು. ಪ್ರದರ್ಶನವು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಜೀವಶಾಸ್ತ್ರ, ತಂತ್ರಜ್ಞಾನ ಮತ್ತು ಇನ್ನೂ ಅನೇಕ ವಿಷಯಗಳನ್ನು ಒಳಗೊಂಡಿದ್ದವು. ಸೌರಶಕ್ತಿ ಶಕ್ತಿ, ಬಾಹ್ಯಾಕಾಶ ಉಪಗ್ರಹಗಳು, ಜಲವಿದ್ಯುತ್ ಜನರೇಟರ್‌ಗಳು, ಎಸಿ ಮತ್ತು ಡಿಸಿ ಮೋಟಾರ್‌ಗಳು, ಭ್ರೂಣಶಾಸ್ತ್ರ, ಲೇಸರ್ ಭದ್ರತೆ ಸೇರಿದಂತೆ ಸುಮಾರು 73 ಮಾದರಿಗಳನ್ನು ಪ್ರದರ್ಶಿಸಲಾಗಿತ್ತು.

Similar News