ಮಕ್ಕಳ ಹೊಟ್ಟೆಗೆ ಯಾಕೆ ಮೋಸ ಮಾಡುವಿರಿ?: ಸಚಿವ ಬಿ.ಸಿ ನಾಗೇಶ್ ಗೆ ಜೆಡಿಎಸ್ ತರಾಟೆ

ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಸ್ಥಗಿತ ವಿಚಾರ

Update: 2023-01-19 11:37 GMT

ಬೆಂಗಳೂರು: ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವದನ್ನ ನಿಲ್ಲಿಸಲಾಗಿದೆ ಎಂಬ ಸುದ್ದಿ ವರದಿಯಾಗಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರೆ, ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ? ಅಥವಾ ಆರೆಸ್ಸೆಸ್ ನಿರ್ದೇಶನಕ್ಕೆ ಕಾಯುತ್ತಿರುವಿರೆ? ನಿಮ್ಮ ಕಳಪೆ ಆಡಳಿತದಿಂದ ಮಕ್ಕಳ ಹೊಟ್ಟೆಗೆ ಯಾಕೆ ಮೋಸ ಮಾಡುವಿರಿ? ಎಂದು ಜೆಡಿಎಸ್ @JanataDal_S ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್,''  ಮೊಟ್ಟೆಯ ಬೆಲೆಯು ಏರಿಕೆಯಾಗಿರುವುದೇ ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ. ಆಡಳಿತ ನಡೆಸುವವರಿಗೆ ದೂರದೃಷ್ಟಿ ಇರಬೇಕು. ವ್ಯವಸ್ಥೆಯನ್ನು ಅರಿತು, ಸಮಸ್ಯೆಗಳನ್ನು ತಡೆಯುವ ಚಾಕಚಕ್ಯತೆ ಇರಬೇಕು. ಸಮಸ್ಯೆಯಾಗುವವರೆಗೂ ಕಾಯ್ದು, ನಂತರ ಪರಿಹಾರಕ್ಕೆ ತಡಕಾಡುವುದು ಒಳ್ಳೆಯ ಲಕ್ಷಣವಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದೆ. 

''ಈ ಹೊತ್ತಲ್ಲಿ ದರ ಪರಿಷ್ಕರಣೆ ಸಾಧ್ಯವಿಲ್ಲ. ಆ ಕುರಿತು ಪರಿಜ್ಞಾನ ಇದ್ದಿದ್ದರೆ, ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬರದಂತೆ ಮಾಡಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ, ಇದಕ್ಕೆ ಪರಿಹಾರ ಹುಡುಕಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಟ್ಟೆ ಸಿಗದ ಪರಿಸ್ಥಿತಿ ರಾಜ್ಯದಾದ್ಯಂತ ವಿಸ್ತರಿಸದ ಹಾಗೆ ನೋಡಿಕೊಳ್ಳಿ'' ಎಂದು ಜೆಡಿಎಸ್ ಸಚಿವರಿಗೆ ಸಲಹೆ ನೀಡಿದೆ.

Similar News