ಜನವಿರೋಧಿ, ನಾಲಾಯಕ್ ಬಿಜೆಪಿ ಸರಕಾರ ಕಿತ್ತೆಸೆಯಿರಿ: ಸಿದ್ದರಾಮಯ್ಯ

Update: 2023-01-19 15:55 GMT

ದಾವಣಗೆರೆ : ಕಪಟ, ಭ್ರಷ್ಟ, ಜನವಿರೋಧಿ, ನಾಲಾಯಕ್ ಬಿಜೆಪಿ ಸರಕಾರ ಕಿತ್ತೆಸೆದು ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಜನರು ಕೈ ಜೋಡಿಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ನಗರ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಕೆಪಿಸಿಸಿ ಏರ್ಪಡಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಇಂತಹ ಕೆಟ್ಟ, ಭ್ರಷ್ಟ, ಜನವಿರೋಧಿ ಸರಕಾರ ನಾವು ಇದುವರೆಗೂ ನೋಡಿಲ್ಲ, ಇವರ ಪಾಪದ ಕೊಡ ತುಂಬಿದೆ, ಇನ್ನು ಮೂರು ತಿಂಗಳು ಮಾತ್ರ ಅಧಿಕಾರ ಇರುವುದು. ಮನೆಗೆ ಹೋಗುವುದಷ್ಟೇ ಬಾಕಿ ಎಂದರು.

ಬಿಜೆಪಿಯವರು ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಹೆಸರಿನಲ್ಲಿ ಮಕ್ಬಲ್ ಟೋಪಿ ಹಾಕಿದ್ದಾರೆ. ಮೀಸಲಾತಿ ಹೆಚ್ಚಳ ಮಾಡಿದರೆ ಸಾಲದು. ಅದನ್ನು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು, 9 ಷಡ್ಯೂಲ್‍ನಲ್ಲಿ ಸೇರ್ಪಡೆ ಮಾಡಿದರೆ ಮಾತ್ರ ಮೀಸಲಾತಿ ಸಿಗುತ್ತದೆ. ಅದರಂತೆ ಪಂಚಮಸಾಲಿ ಸಮುದಾಯವರಿಗೂ ಮೀಸಲಾತಿ ಹೆಸರÀಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದೇವು. ಅದರೆ, ಬಿಜೆಪಿ ಅಧಿಕಾರಕ್ಕೆ ಬಂದು ಪ್ಯಾಕೆಜ್ ವ್ಯವಸ್ಥೆ ಮಾಡಿ ಗುತ್ತಿಗೆ ಸಿಗದಂತೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ, ಎಸ್ಸಿ-ಎಸ್ಟಿ ಮತ್ತು ಇತರೆ ಸಮುದಾಯಗಳ ಸಾಲ ಮನ್ನಾ ಮಾಡಿದ್ದೇವೆ. ಎಸ್ಸಿಪಿ-ಟಿಎಸ್‍ಪಿ ಯೋಜನೆಯಲ್ಲಿ 88 ಸಾವಿರ ಕೋಟಿ ಅನುದಾನ ನೀಡಿ ಕ್ರಾಂತಿಕಾರಿ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಅರ್ಧದಷ್ಟು ಅನುದಾನ ನಿಲ್ಲಿಸುವ ಮೂಲಕ ದ್ರೋಹ ಎಸಗಿದ್ದಾರೆ. ಇಂತಹ ಬಿಜೆಪಿ ಜೊತಗೆ  ಎಸ್ಸಿ –ಎಸ್ಟಿ ಸಮುದಾಯದವರು ಹೋಗಬಾರದು ಮತ್ತು ಬೆಂಬಲ ಕೊಡಬಾರದು ಎಂದು ತಿಳಿಸಿದರು.  

40 ವರ್ಷದ ರಾಜಕಾರಣದಲ್ಲಿ ಹಲವು ಮಂತ್ರಿಗಳನ್ನು , ಶಾಸಕರನ್ನು ನೋಡಿದ್ದೇವೆ. ಅದರೆ, ಬಿಜೆಪಿಯಂತಹ  ಭ್ರಷ್ಟ ಸರ್ಕಾರ ನೋಡಿಲ್ಲ. ಅವರ ಪಾಪದ ಕೊಡ ತುಂಬಿದೆ. ಜನರು ಪಾಶ್ಚಾತಪ ಪಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಇಚ್ಚಿಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ದಾವಣಗೆರೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳ ಜನ ಅರ್ಜಿ ಹಾಕಿದ್ದಾರೆ. ಅದರೆ 200,300 ಜನ ತೋರಿಸಿ ಟಿಕೆಟ್ ಕೇಳಿದರೆ ಕೊಡಲ್ಲ. ನಮ್ಮದು ವ್ಯಕ್ತಿ ಪೂಜೆ ಪಕ್ಷವಲ್ಲ, ಪಕ್ಷದ ಪೂಜೆ ಪಕ್ಷಕ್ಕಾಗಿ ದುಡಿಯುವರಿಗಾಗಿ ಅದ್ಯತೆ ನೀಡುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದರೆ ಹುದ್ದೆಗಳು ನಿಮಗೆ ಸಿಗುತ್ತೇವೆ ಸಂದೇಶ ರವಾನಿಸಿದರು.   

ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಜಾ ಧ್ವನಿ ಕಾರ್ಯಕ್ರಮದ ಮೂಲಕ ಪ್ರತಿ ಜಿಲ್ಲೆಗೆ ಬಸ್ ಯಾತ್ರೆ ನಡೆಸುತ್ತಿದ್ದೇವೆ. ಈ ಮೂಲಕ ಜನರ ನೋವುಗಳನ್ನು ತಿಳಿದುಕೊಂಡು ನಮ್ಮ ಪ್ರಾಣಾಳಿಕೆಯಲ್ಲಿ ಸೇರಿಸಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರತಿ ಮಹಿಳೆಗೆ 2000 ಸಾವಿರ ರೂ ಹಣ ಹಾಗೂ 200 ಮೆಗಾ ವ್ಯಾಟ್ ವಿದ್ಯುತ್ ಉಚಿತ ವಿದ್ಯುತ್ ಸೇರಿದಂತೆ ಹತ್ತು ಹಲವು ಜನಪರ ಯೋಜನೆ ರೂಪಿಸಿದ್ದೇವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸೀಟ್‍ಗಳು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಜನವರಿ 27 ರಿಂದ ಪ್ರತಿ ಮನೆಗೂ ಅರ್ಜಿ ಕಳಿಸುತ್ತೇವೆ ಅಲ್ಲಿ ಯಾರಿಗೆ ಸೌಲಭ್ಯ ಬೇಕು ಅವರು ಅರ್ಜಿ ತುಂಬಿಕೊಡಬೇಕು. ಅಂತಹವರು ಅಫ್ ಲೈನ್ -ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ಈ ಮೂಲಕ ಜನರ ಬಾಗಿಲಿಗೆ ಬರುತ್ತೇವೆ. ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಪರಿಶುದ್ದ ಅಡಳಿತ ನೀಡುತ್ತೇವೆ. ಈ ಬಾರಿ ನಮಗೆ ಅವಕಾಶ ಕೊಡಿ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ,  ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ .ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹಮದ್, ರಾಮಲಿಂಗಾರೆಡ್ಡಿ, ಅಲ್ಲಂವೀರಭದ್ರಪ್ಪ, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಸಾಬ್, ಕೊಂಡಜ್ಜಿ ಮೋಹನ್, ಶಾಸಕ ರಾಮಪ್ಪ,  ಮಾಜಿ ಸಚಿವ ಹೆಚ್ ಅಂಜನೇಯ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ಮಾಜಿ ಶಾಸಕರಾದ ಶಾಂತನಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪ ಅಮರನಾಥ, ಸಚಿನ್ ಮಿಗಾ, ಮುಖಂಡರಾದ ಸೈಯದ್ ಸೈಫುಲ್ಲಾ, ಆಯೂಬ್ ಪೈಲ್ವಾನ್, ಮಾಜಿ ಸಂಸದ ಸನದಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಎಸ್ .ಮಲ್ಲಿಕಾರ್ಜುನ್ ಇತರರು ಇದ್ದರು.

Similar News