ಮುಂದಿನ ತಿಂಗಳು ದಾಸೋಹ ದಿನ ಆಚರಣೆ: ಸಿಎಂ ಬೊಮ್ಮಾಯಿ

Update: 2023-01-21 07:02 GMT

ತುಮಕೂರು, ಜ.21: ರಾಜ್ಯ ಸರಕಾರದ ವತಿಯಿಂದ ಮುಂದಿನ ಫೆಬ್ರವರಿಯಲ್ಲಿ ದಾಸೋಹ ದಿನವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿಯವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ದಾಸೋಹ ದಿನ ಇಡೀ ರಾಜ್ಯದಲ್ಲೇ ಆಚರಣೆಯಾಗುತ್ತದೆ, ವಿಭಿನ್ನ ವಿಶೇಷವಾಗಿ ಆಚರಿಸುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಫೆಬ್ರವರಿಯಲ್ಲಿ ಅಧಿಕೃತವಾಗಿ ಆಚರಣೆ ಮಾಡಲಾಗುವುದು ಅಂದು ಸಾರ್ವತ್ರಿಕ ರಜಾದಿನ ಇರುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ: ಧರಣಿ ಅಂತ್ಯ

ಶಿವಕುಮಾರ ಸ್ವಾಮಿಯ ಹುಟ್ಟೂರಲ್ಲಿ ನಿರ್ಮಾಣವಾಗುತ್ತಿದ್ದ ಪುತ್ಥಳಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ ತಾವು ಮೊನ್ನೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರವಾಗಿ ಮತ್ತೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ತೆಲಂಗಾಣ ಪಿಸಿಸಿ ಅಧ್ಯಕ್ಷ ರೇವಂತ ರೆಡ್ಡಿ, ರಾಜ್ಯದ ಕಾಂಗ್ರೆಸ್ ಶಾಸಕ ಝಮೀರ್‌ ಅಹ್ಮದ್ ಖಾನ್ ಗೆ ಹಣದ ಆಮೀಷ ಒಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿ ಅದು ಕಾಂಗ್ರೆಸ್‌ನವರೇ ಅಪಹರಣ ಮಾಡಿದ್ದಾರೆ. ನಿಜವಾಗಿ ಏನಿದೆ ಎಂಬುದು ಅವರೇ ಸ್ಪಷ್ಟಪಡಿಸಬೇಕು. ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂದು  ಇದೇ ಸಂದರ್ಭದಲ್ಲಿ ಬೊಮ್ಮಾಯಿ ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆಯುತ್ತದೆ ಎಂದು ಪಕ್ಷದ ವರಿಷ್ಠ ಅಮಿತ್ ಷಾ ಹೇಳಿದ್ದಾರೆ. ಆದರೆ ಇಡೀ ಟೀಮ್ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ, 130 ಸೀಟುಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸದ ಮಾತುಗಳನ್ನು ಆಡಿದರು.

Similar News