ಕನ್ನಡದ ಹಿರಿಯ ನಟ ಲಕ್ಷ್ಮಣ್ ನಿಧನ

Update: 2023-01-23 04:28 GMT

ಬೆಂಗಳೂರು, ಜ.23: 200 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್ (77) ಹೃದಯಾಘಾತದಿಂದ ಇಂದು (ಸೋಮವಾರ) ಮುಂಜಾನೆ ನಿಧನ ಹೊಂದಿದ್ದಾರೆ.

ವಯೋಸಹಜ ಸಣ್ಣಪುಟ್ಟ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತ್ತು. ಮಧ್ಯಾಹ್ನ 3.30ಕ್ಕೆ ನಾಗರಭಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇಸಿಜಿ ಮಾಡಿದ ನಂತರ ಎನೂ ಆಗಿಲ್ಲವೆಂದು ವೈದ್ಯರು ತಿಳಿಸಿದ ಬಳಿಕ ಮನೆಗೆ ಮರಳಿದ್ದರು. ನಂತರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸದ್ಯ ಮೂಡಲಪಾಳ್ಯದ ಅವರ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಟ ಲಕ್ಷ್ಮಣ್ ಅವರು ಯಜಮಾನ, ಸೂರ್ಯವಂಶ, ಒಲವಿನ ಉಡುಗೊರೆ ಸೇರಿದಂತೆ ಹಲವು ಸಿನೆಮಾಗಳಲ್ಲಿ ಪೋಷಕ ಪಾತ್ರ ಮಾಡಿ ಗಮನ ಸೆಳೆದಿದ್ದರು. 

Similar News