ಕೌಡೂರು: ವ್ಯಾಪಾರಿಯ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗನಗದು ಕಳವು
Update: 2023-02-06 05:43 GMT
ಕಾರ್ಕಳ, ಫೆ.6: ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೌಡೂರು ಗ್ರಾಮದ ಕಂಡಲ್ಕೆ ಎಂಬಲ್ಲಿ ನಡೆದಿದೆ.
ಮುಹಮ್ಮದ್ ಇರ್ಫಾನ್ ಎಂಬವರು ಫೆ.3ರಂದು ಕಡ್ತಲ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಹೋಗಿದ್ದು, ಅವರ ಹೆಂಡತಿ ಫೆ.4ರಂದು ಬೈಲೂರು ಎಂಬಲ್ಲಿರುವ ಅವರ ತಾಯಿ ಮನೆಗೆ ಹೋಗಿದ್ದರು. ಈ ವೇಳೆ ಮನೆಯ ಮುಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಮಿನಲ್ಲಿದ್ದ 4,000 ರೂ. ನಗದು ಹಾಗೂ ಚಿನ್ನದ ಕರಿಮಣಿ ಸರ, ಚಿನ್ನದ ಗಿಡ್ಡ ನ್ಕೆಲೆಸ್, 2 ಚಿನ್ನದ ಬಳೆ, 2 ಚಿನ್ನದ ಬ್ರಾಸ್ಲೆಟ್, ಚಿನ್ನದ ಉದ್ದ ನೆಕ್ಲೆಸ್, ಚಿನ್ನದ ಚೈನ್, 2 ಚಿನ್ನದ ಕರಿಮಣಿ ಬಳೆಗಳು, 3 ಚಿನ್ನದ ಉಂಗುರಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ಚಿನ್ನಾಭರಗಳ ಒಟ್ಟು ಮೌಲ್ಯ 6,28,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ