ಮೈಸೂರು: ಬೋನಿಗೆ ಬಿದ್ದ ಚಿರತೆ
Update: 2023-02-06 13:36 GMT
ಮೈಸೂರು,ಫೆ.6: ಮೈಸೂರಿನ ಆರ್.ಬಿ.ಐ ಹಿಂಭಾಗದಲ್ಲಿರುವ ಶ್ಯಾದನಹಳ್ಳಿಯಲ್ಲಿ ಚಿರತೆಯೊಂದು ರವಿವಾರ ರಾತ್ರಿ ಸೆರೆಯಾಗಿದೆ.
ಚಿರತೆಯ ಉಪಟಳ ಹೆಚ್ಚಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಎರಡರಿಂದ ಮೂರು ವರ್ಷದ ಗಂಡು ಚರತೆ ಸೆರೆಯಾಗಿದೆ.
ಆರ್.ಬಿ.ಐ ಹಿಂಭಾಗದಲ್ಲಿರುವ ಶ್ಯಾದನಹಳ್ಳಿಯ ತೋಟದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚರತೆ ಬಿದ್ದಿದೆ. ವಿಷಯ ತಿಳಿದು ಅರಣ್ಯ ಇಲಾಖೆ ವಲಯ ಅಧಿಕಾರಿ ಆರ್‍ಎಫ್‍ಒ ಸುರೇಂದ್ರ ಕೆ. ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ರವಾನಿಸಿದ್ದಾರೆ.