ಪಿಪಿಸಿಯ ವರ್ಷಿತಾಗೆ ಬಿಬಿಎ ಪ್ರಥಮ ರ‍್ಯಾಂಕ್

Update: 2023-03-10 14:57 GMT

ಉಡುಪಿ, ಮಾ.10:  ಮಂಗಳೂರು ವಿಶ್ವವಿದ್ಯಾನಿಲಯವು 2021-22 ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಎರಡು ರ‍್ಯಾಂಕ್ ಗಳನ್ನು ಪಡೆದುಕೊಂಡಿದೆ. 

ಬಿಬಿಎ ಪದವಿಯಲ್ಲಿ ವರ್ಷಿತಾ ರಮೇಶ ಸುವರ್ಣ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಇವರು ಕನ್ನರ್ಪಾಡಿಯ ರಮೇಶ ಸುವರ್ಣ ಹಾಗೂ ಸುಮತಿ ಆರ್ ಸುವರ್ಣರ ಪುತ್ರಿ. 

ಇದೇ ವಿಭಾಗದಲ್ಲಿ ವಿನುತ ಕಾಮತ್ ಒಂಭತ್ತನೇ ರ‍್ಯಾಂಕ್  ಪಡೆದಿದ್ದಾರೆ.  ಇವರು ಮಲ್ಪೆಯ ಗುರುದತ್ತ ಕಾಮತ್ ಮತ್ತು ಯೋಗಿನಿ ಕಾಮತ್ ಇವರ ಪುತ್ರಿ. ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ. 

Similar News