ಮಾ.14: ಗುರುಪುರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಸಮಾವೇಶ
ಬಜ್ಪೆ, ಮಾ. 13: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಹಾಗೂ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶವು ಮಾ.14ರ ಬೆಳಗ್ಗೆ 10.30ಕ್ಕೆ ಗಂಜಿಮಠ ಝಾರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ. ಅಬ್ದುಲ್ ಜಬ್ಬಾರ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಿರಾಜ್, ಉಪಾಧ್ಯಕ್ಷರಾದ ಮುದಬ್ಬಿರ್ ಅಹ್ಮದ್ ಖಾನ್, ಸೈಯ್ಯದ್ ಇಮ್ರಾನ್, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅಹ್ಮದ್, ಕಾರ್ಯಕಾರಿ ಕಾರ್ಯದರ್ಶಿಗಳಾದ ರೆಹನಾ, ರಝಿಯಾ ಸುಲ್ತಾನ, ಮಾಜಿ ಸಚಿವರಾದ ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜ, ಮೊಯ್ದೀನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸೇರಿದಂತೆ ಹಲವು ಕಾಗ್ರೆಸ್ ನಾಯಕರು ಉಪಸ್ಥಿತರಿರುವರು ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಕಟಣೆ ತಿಳಿಸಿದೆ.