​ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ವಂಚನೆ ಆರೋಪ: ಯುವಕ ಸೆರೆ

Update: 2023-03-20 14:52 GMT

ಮಂಗಳೂರು, ಮಾ.20: ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಬಳಿಕ ವಂಚಿಸಿದ ಆರೋಪಿ ಕೇರಳದ ಕಲ್ಲಿಕೋಟೆಯ ಜಿಜೊ ಜಾನ್ ಪಿ.ಕೆ (29) ಎಂಬಾತನನ್ನು ಮಂಗಳೂರು ನಗರ  ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಪ್ರತೀ  ತಿಂಗಳು ಶೇ.15 ಲಾಭಾಂಶ ನೀಡುವುದಾಗಿ ಶಕ್ತಿನಗರ ಪರಿಸರದ ನಿವಾಸಿಯಿಂದ ಸುಮಾರು 1 ಕೋ.ರೂ. ಗಳನ್ನು ಹೂಡಿಕೆ ಮಾಡಿಸಿ ಬಳಿಕ ಲಾಭಾಂಶ ನೀಡದೆ ವಂಚಿಸಿದ್ದ ಎಂದು ಆರೋಪಿಸಲಾಗಿತ್ತು.

ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ  ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ, ಎಸ್ಸೈ ಲೀಲಾವತಿ ಮತ್ತಿತರರು ಪಾಲ್ಗೊಂಡಿದ್ದರು.

Similar News