ಕಾರ್ಕಳ: ಜೆಸಿಐಯಿಂದ ಪೌರ ಕಾರ್ಮಿಕರಿಗೆ ಸನ್ಮಾನ
Update: 2023-04-05 09:18 GMT
ಕಾರ್ಕಳ, ಎ.5: ಜೆಸಿಐಯ ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ ಯೋಜನೆಯಡಿಯಲ್ಲಿ ಜೆಸಿಐ ಕಾರ್ಕಳ ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವು ಕಾರ್ಕಳ ಪುರಸಭೆಯಲ್ಲಿ ನಡೆಯಿತು
ಪುರಸಭೆಯ ಪೌರ ಕಾರ್ಮಿಕರಾದ ಸತೀಶ ಹಾಗೂ ಸಂಜೀವರನ್ನು ಮುಖ್ಯಾಧಿಕಾರಿಯಾದ ರೂಪಾ ಟಿ. ಶೆಟ್ಟಿ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯ ಜಯರಾಮ್ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ಅಧ್ಯಕ್ಷ ವಿಘ್ನೇಶ್ ಪ್ರಸಾದ್, ಕಾರ್ಯದರ್ಶಿ ಶ್ವೇತಾ ಎಸ್. ಜೈನ್ , ಮಾಜಿ ಅಧ್ಯಕ್ಷೆ ದಿವ್ಯಸ್ಮಿತಾ ಭಟ್, ಕೋಶಾಧಿಕಾರಿ ಶ್ರೀಶಾ ಭಟ್, ಉಪಾಧ್ಯಕ್ಷ ಅವಿನಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.