ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತ ಬಾಲಿವುಡ್ ನಟಿ ಕ್ರಿಸಾನ್ ಪಿರೇರಾ ಶಾರ್ಜಾ ಜೈಲಿನಿಂದ ಬಿಡುಗಡೆ

Update: 2023-04-27 05:24 GMT

ದುಬೈ: ಯುಎಇಯ ಶಾರ್ಜಾ ಜೈಲಿನಲ್ಲಿದ್ದ ನಟಿ ಕ್ರಿಸಾನ್ ಪಿರೇರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯನ್ನು ಬಂಧಿಸಲಾಗಿತ್ತು.

ನಟಿಯ  ಬಳಿಯಿದ್ದ ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿರುವುದು ಪತ್ತೆಯಾದ ನಂತರ ಪೆರೇರಾ ಅವರನ್ನು ಶಾರ್ಜಾದಲ್ಲಿ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಬಂಧಿಸಿದ್ದರು.

27ರ ಹರೆಯದ ಪರೇರ , ಸಡಕ್ 2 ಮತ್ತು ಬಾಟ್ಲಾ ಹೌಸ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ  ಬಾಲಿವುಡ್ ನಟಿಯನ್ನು ಸಿಲುಕಿಸಿದ  ಆರೋಪದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ಇಬ್ಬರನ್ನು ಬಂಧಿಸಿದೆ.

ಪೋಲಿಸರ ಪ್ರಕಾರ, ಬಂಧಿತ  ಇಬ್ಬರು ಆರೋಪಿಗಳು ಕ್ರಿಸನ್ ಪೆರೇರಾ ಶಾರ್ಜಾಕ್ಕೆ ಸಾಗಿಸಿದ ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿಟ್ಟಿದ್ದರು.

ಆರೋಪಿಗಳನ್ನು ಮುಂಬೈನ ಬೊರಿವಲಿ ನಿವಾಸಿ ಅಂತೋನಿ ಪೌಲ್ ಮತ್ತು ಆತನ ಸಹಚರ, ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ನಿವಾಸಿ ರಾಜೇಶ್ ಬಭೋಟೆ ಅಲಿಯಾಸ್ ರವಿ ಎಂದು ಗುರುತಿಸಲಾಗಿದೆ.

Similar News