ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ಮುಂಬೈ ಕೋರ್ಟ್ ನಿಂದ ನಟ ಸೂರಜ್ ಪಾಂಚೋಲಿ ಖುಲಾಸೆ

Update: 2023-04-28 07:24 GMT

ಹೊಸದಿಲ್ಲಿ: ನಟಿ ಜಿಯಾ ಖಾನ್(Jiah Khan) ಆತ್ಮಹತ್ಯೆಗೆ ಶರಣಾದ ಸುಮಾರು ಒಂದು ದಶಕದ ನಂತರ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ಜಿಯಾ ಅವರ  ಗೆಳೆಯ ಹಾಗೂ ಸಿನೆಮಾ ನಟ ಸೂರಜ್ ಪಾಂಚೋಲಿಯನ್ನು( Sooraj Pancholi) ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ಖುಲಾಸೆಗೊಳಿಸಿದೆ.

ಜಿಯಾ ಖಾನ್(25ವರ್ಷ) ಜೂನ್ 3, 2013 ರಂದು ಮುಂಬೈನ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜಿಯಾ ಬರೆದಿದ್ದಾರೆ ಎಂದು ಹೇಳಲಾದ ಆರು ಪುಟಗಳ ಪತ್ರದ ಆಧಾರದ ಮೇಲೆ ಆ ನಂತರ ಪೊಲೀಸರು  ಸೂರಜ್ ಪಾಂಚೋಲಿಯನ್ನು ಬಂಧಿಸಿದ್ದರು.  ಐಪಿಸಿ ಸೆಕ್ಷನ್  306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದರು.

ವಿಶೇಷ ಸಿಬಿಐ ನ್ಯಾಯಾಧೀಶ ಎಎಸ್ ಸಯ್ಯದ್ ಅವರು "ಸಾಕ್ಷ್ಯಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಲಾಗಿದೆ" ಎಂದು ಹೇಳಿದರು.

Similar News