ಜಮ್ಮು-ಕಾಶ್ಮೀರದಲ್ಲಿ 4.1 ತೀವ್ರತೆಯ ಭೂಕಂಪನ

Update: 2023-04-30 15:40 GMT

ಹೊಸದಿಲ್ಲಿ,ಎ.30: ಜಮ್ಮು-ಕಾಶ್ಮೀರದಲ್ಲಿ ರವಿವಾರ ಬೆಳಗಿನ ಜಾವ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ. ’

ನಸುಕಿನ 5.15ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು,ಕೇಂದ್ರಬಿಂದು ಭೂಮಿಯ ಐದು ಕಿ.ಮೀ.ಆಳದಲ್ಲಿತ್ತು.

ಈ ನಡುವೆ ಜಮ್ಮು-ಕಾಶ್ಮೀರವು ಅತ್ಯಂತ  ಹೆಚ್ಚಿನ ಭೂಕಂಪನ ವಲಯದಲ್ಲಿರುವುದರಿಂದ ಮತ್ತು ನೆರೆಹಾನಿಯ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವುದರಿಂದ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ತಗ್ಗಿಸಲು ಎಲ್ಲ 20 ಜಿಲ್ಲೆಗಳಲ್ಲಿ ಅತ್ಯಾಧುನಿಕ ತುರ್ತು ಕಾರ್ಯಾಚರಣೆ ಕೇಂದ್ರ (ಇಒಸಿ)ಗಳನ್ನು ಸ್ಥಾಪಿಸಲು ಈ ಕೇಂದ್ರಾಡಳಿತ ಪ್ರದೇಶದ ಆಡಳಿತವು ನಿರ್ಧರಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ 2019ರ ವ್ಯಾಪ್ತಿಗೊಳಪಟ್ಟಿರುವ ಬುಡ್ಗಾಮ್ ಜಿಲ್ಲೆಯಲ್ಲಿ ಇಒಸಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು,ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.

ಜಮ್ಮು-ಕಾಶ್ಮೀರ ಸರಕಾರವು ತುರ್ತು ಪ್ರತಿಕ್ರಿಯಾ ಬೆಂಬಲ ವ್ಯವಸ್ಥೆಯ ಅನುಷ್ಠಾನಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ವಿಕೋಪಗಳ ಸಂದರ್ಭದಲ್ಲಿ ಜನರು ನೆರವಿಗಾಗಿ ದೂರವಾಣಿ ಸಂಖ್ಯೆ 112ಕ್ಕೆ ತುರ್ತು ಕರೆಗಳನ್ನು ಮಾಡಬಹುದಾಗಿದೆ.

Similar News