ದಿವಾಳಿತನ ಘೋಷಿಸಿದ ಗೋಫಸ್ಟ್‌ ವಿಮಾನಯಾನ ಸಂಸ್ಥೆ: ಮೇ 3, 4ರಂದು ನಿಗದಿಯಾಗಿದ್ದ ಎಲ್ಲಾ ಹಾರಾಟ ರದ್ದು

Update: 2023-05-02 13:40 GMT

ಹೊಸದಿಲ್ಲಿ: ಭಾರತೀಯ ಕಡಿಮೆ-ವೆಚ್ಚದ ವಾಹಕ ಗೋ ಫರ್ಸ್ಟ್ ಏರ್‌ಲೈನ್ಸ್‌ ಸಂಸ್ಥೆಯು ದಿಲ್ಲಿಯ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗಾಗಿ ಅರ್ಜಿ ಸಲ್ಲಿಕೆ ಮಾಡಿದೆ.

ತನ್ನ ಎಲ್ಲಾ ವಿಮಾನಗಳು ಮೇ 3 ಮತ್ತು 4 ರಂದು  ರದ್ದುಗೊಳಿಸಲಾಗುವುದು ಎಂದು ಗೋ ಫಸ್ಟ್ ಏರ್‌ಲೈನ್ಸ್ ತಿಳಿಸಿರುವುದಾಗಿ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಯಂತ್ರಕ ತಿಳಿಸಿದೆ.

ಪ್ರ್ಯಾಟ್ ಮತ್ತು ವಿಟ್ನಿ (P&W) ಇಂಜಿನ್‌ಗಳನ್ನು ಪೂರೈಸದ ಕಾರಣ ಏರ್‌ಲೈನ್ ತನ್ನ ಫ್ಲೀಟ್‌ನ ಅರ್ಧಕ್ಕಿಂತ ಹೆಚ್ಚು 28 ವಿಮಾನಗಳನ್ನು ರದ್ದು ಮಾಡಿದೆ ಎಂದು ಏರ್‌ಲೈನ್‌ನ ಮುಖ್ಯಸ್ಥ ಕೌಶಿಕ್ ಖೋನಾ ಹೇಳಿದ್ದಾರೆ.

Similar News