ಎಚ್ಚರ: ಹೊಸ ಬಗೆಯ ʼವಾಟ್ಸ್ ಆ್ಯಪ್ ಕಾಲ್‌ʼ ಹಗರಣದ ಬಗ್ಗೆ ಜಾಗೃತರಾಗಿ !

Update: 2023-05-06 10:00 GMT

ಹೊಸ ದಿಲ್ಲಿ: ವಾಟ್ಸ್ ಆ್ಯಪ್ ಸ್ಪ್ಯಾಮ್ ಹಾಗೂ ಮಾರುಕಟ್ಟೆ ಸಂದೇಶಗಳ ಪಾಲಿಗೆ ಕೇಂದ್ರ ಸ್ಥಳವಾಗಿ ಬದಲಾಗಿರುವುದರಿಂದ ಲಕ್ಷಾಂತರ ಬಳಕೆದಾರರು ಸಾಂಪ್ರದಾಯಿಕ ಮೆಸೇಜಿಂಗ್ ಆ್ಯಪ್‌ನಿಂದ ವಾಟ್ಸ್ ಆ್ಯಪ್‌ಗೆ ಜಿಗಿದಿದ್ದಾರೆ. ಆದರೆ, ವಾಟ್ಸ್ ಆ್ಯಪ್ ಮೆಸೇಜಿಂಗ್ ಆ್ಯಪ್ ಬಳಸಿಕೊಂಡು ನಾಜೂಕು ಹಗರಣಗಳು ಉದ್ಭವಿಸುತ್ತಿವೆ.

ನಿಮ್ಮ ವಾಟ್ಸ್ ಆ್ಯಪ್‌ಗೆ ಸಂದೇಶ ಕಳಿಸಲು ಅನುಮತಿ ಇಲ್ಲದಿರುವ ಕಂಪನಿಗಳು ನಿಮಗೆ ಜಾಹೀರಾತು ಸಂದೇಶಗಳನ್ನು ಕಳಿಸಲು ಸಾಧ್ಯವಿಲ್ಲ ಎಂಬುದೇನೋ ನಿಜ; ಆದರೆ, ಇತ್ತೀಚಿನ ದಿನಗಳಲ್ಲಿ ಜನರು ನಿಯಮಿತವಾಗಿ ಗೊತ್ತುಗುರಿಯಿಲ್ಲದ ಅಂತಾರಾಷ್ಟ್ರೀಯ ಸಂಖ್ಯೆ ಹೊಂದಿರುವ ಶ್ರಾವ್ಯ ಮತ್ತು ದೃಶ್ಯ ವಾಟ್ಸ್ ಆ್ಯಪ್ ಕರೆಗಳನ್ನು ಸ್ವೀಕರಿಸತೊಡಗಿದ್ದಾರೆ. ಇಂತಹ ಬಹುತೇಕ ಕರೆಗಳ ಐಎಸ್‌ಡಿ ಸಂಕೇತ ಸಂಖ್ಯೆಗಳು ಮಲೇಶಿಯಾ, ಕೀನ್ಯಾ ಹಾಗೂ ವಿಯೆಟ್ನಾಂನಂತಹ ದೇಶಗಳದ್ದಾಗಿವೆ.

ಇಂತಹ ವಾಟ್ಸ್ ಆ್ಯಪ್ ಕರೆಗಳಿಂದ ಬಹುತೇಕ ಬಳಕೆದಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಯಾರಿಗೂ ಅವರ ಕಾರ್ಯಸೂಚಿ ಏನು ಎಂದು ಅರ್ಥವಾಗುತ್ತಿಲ್ಲ. ಆದರೆ, ಇಂತಹ ಗೊತ್ತುಗುರಿಯಿಲ್ಲದ ವಾಟ್ಸ್ ಆ್ಯಪ್ ಸಂಖ್ಯೆಗಳು ನಿಮ್ಮಿಂದ ನಿಮ್ಮ ಗುಪ್ತ ದತ್ತಾಂಶಗಳ ವಿವರಗಳ ಬಾಯಿ ಬಿಡಿಸಿಕೊಂಡು ನಿಮ್ಮ ಖಾತೆಯ ಅಥವಾ ಇತರರ ಖಾತೆಯಲ್ಲಿನ ಹಣವನ್ನು ದೋಚುವ ಉದ್ದೇಶ ಹೊಂದಿರುವ ಸಾಧ್ಯತೆಯೂ ಇದೆ.

ನೀವು ಅಂತಾರಾಷ್ಟ್ರೀಯ ಸಂಕೇತ ಸಂಖ್ಯೆ ಹೊಂದಿರುವ ವಾಟ್ಸ್ ಆ್ಯಪ್ ಸಂಖ್ಯೆಗಳಿಂದ ಕರೆ ಸ್ವೀಕರಿಸುತ್ತಿದ್ದೀರಾ ಎಂದ ಮಾತ್ರಕ್ಕೆ ಅವು ಅಂತಾರಾಷ್ಟ್ರೀಯ ಸಂಖ್ಯೆಯೇ ಆಗಿರಬೇಕು ಎಂದೇನಿಲ್ಲ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಾಟ್ಸ್ ಆ್ಯಪ್ ಸಂಖ್ಯೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಅಂತಹ ವಾಟ್ಸ್ ಆ್ಯಪ್ ಕರೆಗಳು ನಿಮ್ಮ ನಗರದಿಂದಲೇ ಬಂದಿರುವ ಸಾಧ್ಯತೆಯೂ ಇದೆ.

ವಾಟ್ಸ್ ಆ್ಯಪ್ ತನ್ನ ಎಲ್ಲ ಕರೆ ಮತ್ತು ಸಂದೇಶಗಳನ್ನು encrypt ಮಾಡಿರುತ್ತಾದ್ದರಿಂದ ಹಾಗೆ ಕರೆ ಮಾಡಿದ ವ್ಯಕ್ತಿಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಮತ್ತು ಈ ದೌರ್ಬಲ್ಯವನ್ನೇ ಹ್ಯಾಕರ್‌ಗಳು ವಂಚನೆಗೆ ಬಳಸುತ್ತಿದ್ದಾರೆ. ಮೇಲೆ ಹೇಳಿದ ದೇಶಗಳ ಅಂತಾರಾಷ್ಟ್ರೀಯ ಸಂಕೇತ ಸಂಖ್ಯೆ ಹೊಂದಿರುವ ವಾಟ್ಸ್ ಆ್ಯಪ್ ಸಂಖ್ಯೆಗಳಿಂದ ಕರೆ ಬಂದರೆ ಅಂತಹ ಕರೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸದಿರಿ ಮತ್ತು ಅಂತಹ ಸಂಖ್ಯೆಯನ್ನು ನಿರ್ಬಂಧಿಸಿ. ಆಗ ಅವರು ಮತ್ತೆ ನಿಮಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ.

Similar News