ಉಡುಪಿ: ಮೇ 7ರಂದು ಕಾಂಗ್ರೆಸ್‌ನಿಂದ ಬೈಕ್ ರ್ಯಾಲಿ

Update: 2023-05-06 15:56 GMT

ಉಡುಪಿ, ಮೇ 6: ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಗಳ ಜಂಟಿ ಆಶ್ರಯದಲ್ಲಿ ಬೈಕ್ ರ್ಯಾಲಿಯನ್ನು ಮೇ 7ರಂದು ಮಧ್ಯಾಹ್ನ 3 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.

ಪಡುತೋನ್ಸೆ ಬೇಂಗ್ರೆಯ ರಾಮ ಭಜನಾ ಮಂದಿರದಿಂದ ಹೊರಡಲಿರುವ ರ್ಯಾಲಿ, ಹೂಡೆಯಿಂದ ಗುಜ್ಜರಬೆಟ್ಟು, ತೊಟ್ಟಂ, ವಡಭಾಂಡೇಶ್ವರ ಸರ್ಕಲ್‌ನಿಂದ ರಾಜರಸ್ತೆಯ ಮೂಲಕ ಏಳೂರು ಮೊಗವೀರ ಸಭಾಭವನದ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಸಮಾಪ್ತಿಗೊಳ್ಳಲಿದೆ. ಸಂಜೆ 6ಗಂಟೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಿಕೇತ್‌ರಾಜ್ ಮೌರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News