ಇಂದು ವಿಶ್ವ ಜೀವವೈವಿಧ್ಯತೆಯ ದಿನ

Update: 2023-05-22 06:57 GMT

ಪೂರ್ವ ಹಿಮಾಲಯ ಜೀವವೈವಿಧ್ಯ ತಾಣಗಳಲ್ಲಿ 163 ಜಾತಿ ಪ್ರಾಣಿಗಳಿದ್ದು ಅವುಗಳಲ್ಲಿ ಒಂದು ಕೊಂಬಿನ ಖಡ್ಗಮೃಗ, ನೀರೋತಿ, ಏಶ್ಯದ ನೀರೆಮ್ಮೆ, 45 ಸಸ್ತನಿಗಳು, 50 ಹಕ್ಕಿಗಳು, 17 ಸರೀಸೃಪಗಳು, 12 ಉಭಯಚರಗಳು, 3 ಅಕಶೇರುಕಗಳು ಮತ್ತು 36 ಸಸ್ಯ ಜಾತಿಗಳು ಸೇರಿವೆ. ಸುಮಾರು 10,000 ಜಾತಿಯ ಸಸ್ಯಗಳಿವೆ, ಅದರಲ್ಲಿ  3/1 ಭಾಗ ಸ್ಥಳೀಯ ಮತ್ತು ವಿಶ್ವದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ.

ಪ್ರತೀ ವರ್ಷ ನಡೆಸುವ ಜೀವವೈವಿಧ್ಯ ದಿನ ತನ್ನದೇ ವಿಶೇಷತೆಯನ್ನು ಹೊಂದಿರುತ್ತದೆ. ಈ ವರ್ಷ ಕುನ್ಮಿಂಗ್-ಮಾಂಟ್ರಿ ಯಲ್ (ಸಿ.ಒ.ಪಿ-15)ನಲ್ಲಿ ನಡೆಯುವ ಜಾಗತಿಕ ಜೀವವೈವಿಧ್ಯ ಆಚರಣೆಗಳಿಗೆ ಒಂದು ಚೌಕಟ್ಟನ್ನು ಅಳವಡಿಸುವ ಮೂಲಕ ಒಂದು ಹೊಸ ಭರವಸೆಯನ್ನು ತರಲಾಗುತ್ತದೆ ಎನ್ನಲಾಗಿದೆ. ಈ ಐತಿಹಾಸಿಕ ಸಭೆಯನ್ನು ಇತಿಹಾಸದಲ್ಲಿ ಗುರುತಿಸಲು ಒಂದು ಹೊಸ ಘೋಷಣೆಯನ್ನು ಸೃಷ್ಟಿಸಲಾಗಿದೆ. ಅದರಂತೆ ‘‘ಒಪ್ಪಂದದಿಂದ ಕ್ರಿಯಗೆ: ಜೀವವೈವಿಧ್ಯತೆಯನ್ನು ಮರಳಿ ನಿರ್ಮಿಸುವುದು’’.

ಜೀವವೈವಿಧ್ಯತೆಯನ್ನು ಅನೇಕ ವೇಳೆ ವೈವಿಧ್ಯಮಯ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳ ದೃಷ್ಟಿಯಿಂದ ಅರ್ಥಮಾಡಿಕೊ ಳ್ಳಲಾಗುತ್ತದೆ. ಆದರೆ ಇದು ಪ್ರತೀ ಜೀವಜಾತಿಯೊಳಗಿನ ಆನುವಂಶಿಕ ವ್ಯತ್ಯಾಸಗಳನ್ನು ಸಹ ಒಳಗೊಂಡಿರುತ್ತದೆ. ಉದಾಃ ಬೆಳೆಗಳು ಮತ್ತು ಜಾನುವಾರುಗಳ ತಳಿಗಳ ನಡುವೆ ಮತ್ತು ವಿವಿಧ ಪರಿಸರಗಳ ವ್ಯವಸ್ಥೆಗಳು. ಅಂದರೆ ಸರೋವರಗಳು, ಅರಣ್ಯ, ಮರುಭೂಮಿ ಮತ್ತು ಕೃಷಿ ಪ್ರದೇಶಗಳು. ಈ ಜೀವವೈವಿಧ್ಯತೆಯ ಜೊತೆಗೆ ಮನುಷ್ಯ ಸದಸ್ಯನು ಕೂಡ ಪರಸ್ಪರ ಕ್ರಿಯೆಗಳನ್ನು ಹೊಂದಿದ್ದಾನೆ. ಇದು ನಿಸರ್ಗದ ಸಂಕೀರ್ಣ ಕ್ರಿಯಾತ್ಮಕ ಕಾರ್ಯವಾಗಿದೆ. 

ಜೈವಿಕ ವೈವಿಧ್ಯತೆಯ ಸಂಪನ್ಮೂಲಗಳು ನಾವು ನಾಗರಿಕತೆಗಳನ್ನು ನಿರ್ಮಿಸುವ ಆಧಾರಸ್ತಂಭಗಳಾಗಿವೆ. ಮೀನುಗಳು ಸುಮಾರು ಮುನ್ನೂರು ಕೋಟಿ ಜನರಿಗೆ ಶೇ.20ರಷ್ಟು ಜೈವಿಕ ಪ್ರೊಟೀನ್ ಅನ್ನು ಒದಗಿಸುತ್ತದೆ. ಮಾನವನ ಆಹಾರದ 80 ಪ್ರತಿಶತಕ್ಕೂ ಹೆಚ್ಚು ಆಹಾರ ಸಸ್ಯಗಳಿಂದ ಉತ್ಪಾದನೆಯಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಶೇ.80ರಷ್ಟು ಜನರು ಮೂಲ ಭೂತ ಆರೋಗ್ಯ ರಕ್ಷಣೆಗಾಗಿ ಸಾಂಪ್ರದಾಯಿಕ ಸಸ್ಯ ಆಧಾರಿತ ಔಷಧಿಗಳನ್ನು ಅವಲಂಬಿಸಿದ್ದಾರೆ. 

ಆದರೆ ಜೀವವೈವಿಧ್ಯತೆಯ ನಷ್ಟವು ನಮ್ಮ ಆರೋಗ್ಯ ಸೇರಿದಂತೆ ಎಲ್ಲರಿಗೂ ಅಪಾಯವನ್ನು ಉಂಟುಮಾಡುತ್ತದೆ. ಜೀವವೈವಿಧ್ಯತೆಯ ನಷ್ಟವು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳಾದ ಝೂನೋಸ್ಗಳನ್ನು ವಿಸ್ತರಿಸಬಹುದು ಎಂದು ಸಾಬೀತಾಗಿದೆ. ಇನ್ನೊಂದು ಕಡೆ ನಾವು ಜೀವವಿವೈಧ್ಯತೆಯನ್ನು ಹಾಗೆಯೇ ಉಳಿಸಿ ಕೊಂಡರೆ, ಕೊರೋನ ವೈರಸ್ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಇದು ಅತ್ಯುತ್ತಮ ಸಾಧನೆಗಳನ್ನು ನೀಡುತ್ತದೆ. 

ಜೈವಿಕ ವೈವಿಧ್ಯತೆಯು ಭವಿಷ್ಯದ ಪೀಳಿಗೆಗಳಿಗೆ ಅಪಾರ ಮೌಲ್ಯದ ಜಾಗತಿಕ ಆಸ್ತಿಯಾಗಿದೆ ಎನ್ನುವುದು ತಿಳಿದ ವಿಷಯವೇ ಆಗಿದೆ. ಆದರೆ ಮಾನವ ಚಟುವಟಿಕೆಗಳು ಜೈವಿಕ ವೈವಿಧ್ಯಮ ಪ್ರಭೇದಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಶಿಕ್ಷಣ/ಜಾಗರೂಕತೆಯನ್ನು ಮೂಡಿಸುವುದು ಅತ್ಯಂತ ಅಗತ್ಯದ ವಿಷಯ ವಾಗಿದ್ದು ಅದನ್ನು ಜನರ ಮುಂದೆ ಪ್ರಸ್ತುತಪಡಿಸಲು ಯುಎನ್ ಜೀವವೈವಿಧ್ಯ ದಿನವನ್ನಾಗಿ ಆಚರಿಸುತ್ತದೆ. ಇದಕ್ಕೆ ಜಗತ್ತಿನ ಜನರೆಲ್ಲ ಕೈಗೂಡಿಸುವುದು ಅತ್ಯಂತ ತುರ್ತುಕೆಲಸವಾಗಿದೆ. 

ವಿಶ್ವ ಜೀವವೈವಿಧ್ಯತೆ 30ನೇ ವರ್ಷದ ದಿನವನ್ನು ಇದೇ ಮೇ 22 ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಮಾನವನ ಆಘಾತಕಾರಿ ಚಟುವಟಿಕೆಗಳಿಂದ ಸಾವಿರಾರು ಜಾತಿಯ ಜೀವಸಂಕುಲ ಗಣನೀಯವಾಗಿ ನಾಶವಾಗುತ್ತಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಸರಕಾರ-ಸರಕಾರೇತರ ಸಂಘಟನೆಗಳು, ಸ್ಥಳೀಯ ಜನರು ಮತ್ತು ಸ್ಥಳೀಯ ವೈಜ್ಞಾನಿಕ ಸಮುದಾಯಗಳು ಇದರಲ್ಲಿ ಪಾಲ್ಗೊಳ್ಳುತ್ತವೆ. ವಿಶ್ವದಾದ್ಯಂತ ಜೀವವೈವಿಧ್ಯತೆಯ ಸಂರಕ್ಷಣೆ, ಸಮರ್ಥನೀಯ ಬಳಕೆಗಾಗಿ ವೈಜ್ಞಾನಿಕ ಅಭಿವೃದ್ಧಿ, ಜೈವಿಕ ಭದ್ರತೆಯ ಬಳಕೆಯಿಂದ ಉದ್ಭವಿಸುವ ಪ್ರಯೋಜನಗಳ ನ್ಯಾಯೋಚಿತ ಹಂಚಿಕೆ, ರಾಷ್ಟ್ರೀಯ ಜೀವವೈವಿಧ್ಯ ತಂತ್ರಗಳು, ಕ್ರಿಯಾ ಯೋಜನೆಗಳ ಸೃಷ್ಟಿ ಮತ್ತು ಅನುಷ್ಠಾನ ಇತ್ಯಾದಿಗಳ ಬಗ್ಗೆ ಗಮನ ಕೊಡಲಾಗಿದೆ. 

ಜೀವವಿವೈಧ್ಯತೆ 2011 ರಿಂದ 2020 ಕಾರ್ಯತಂತ್ರ ಯೋಜನೆ ಯನ್ನು ಅಳವಡಿಸಿದ ನಂತರ, ಈ ಯೋಜನೆಯನ್ನು 196 ರಾಷ್ಟ್ರಗಳು ಅಂಗೀಕರಿಸಿವೆ. ಜೀವವೈವಿಧ್ಯ ತಾಣ ಒಂದು ಜೈವಿಕ ಭೌಗೋಳ ಪ್ರದೇಶವಾಗಿದ್ದು, ಗಮನಾರ್ಹವಾಗಿ ವಿನಾಶದ ಬೆದರಿಕೆಗೆ ಒಳಗಾಗಿರುತ್ತದೆ. ‘ಮೈಯರ್ಸ್ ನಕ್ಷೆ 2000’ರ ಪ್ರಕಾರ ಜೀವವೈವಿಧ್ಯ ತಾಣ ಎನಿಸಿಕೊಳ್ಳಲು ಎರಡು ಕಟ್ಟುನಿಟ್ಟಾದ ಮಾನದಂಡನೆಗಳನ್ನು ಪೂರೈಸಬೇಕು: ಆ ತಾಣ ಕನಿಷ್ಠ ಶೇ.0.5 ಅಥವಾ 1,500 ಜಾತಿಯ ಸಸ್ಯಗಳನ್ನು ಹೊಂದಿರಬೇಕು ಅಥವಾ ಅದರ ಮೂಲದ ಶೇ.70 ಪ್ರಾಥಮಿಕ ಸಸ್ಯವರ್ಗ ನಾಶವಾಗಿರಬೇಕು. ವಿಶ್ವದಾದ್ಯಂತ 36 ಪ್ರದೇಶಗಳು ಈ ಕೆಳಗಿನ ಅರ್ಹತೆಯನ್ನು ಪಡೆದುಕೊಂಡಿದ್ದು ವಿಶ್ವದ ಸುಮಾರು ಶೇ.60 ಸಸ್ಯಗಳು, ಪಕ್ಷಿಗಳು, ಸಸ್ತನಿ, ಸರೀಸೃಪ ಮತ್ತು ಉಭಯಚರಗಳ ಜಾತಿಗಳು ಉಳಿದುಕೊಂಡಿವೆ. 

ಭೂಮಿಯ ಮೇಲಿನ ಈ ಜೀವಜಾಲ ತಾಣಗಳನ್ನು ಸಂರಕ್ಷಿಸಲು ಹಲವಾರು ಅಂತರ್ರಾಷ್ಟ್ರೀಯ ಸಂಘಟನೆಗಳು ಕೆಲಸ ಮಾಡುತ್ತಿವೆ. ಪರಿಸರ ವ್ಯವಸ್ಥೆ ಸಹಭಾಗಿತ್ವ ನಿಧಿ, ಸರಕಾರೇತರ ಸಂಸ್ಥೆಗಳಿಗೆ ಹಣಕಾಸು ಮತ್ತು ತಾಂತ್ರಿಕ ಸಹಾಯವನ್ನು ಒದಗಿಸುತ್ತದೆ ಮತ್ತು ಭೂಮಿಯ ಮೇಲಿನ ಶ್ರೀಮಂತ ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ವಿಶ್ವ ವೈಲ್ಡ್ ಫಂಡ್ ಫಾರ್ ನೇಚರ್, ಬರ್ಡ್ ಲೈಫ್ ಇಂಟರ್ನ್ಯಾಷನಲ್, ಅಂತರ್ ರಾಷ್ಟ್ರೀಯ ಸಸ್ಯ ಜೀವನ, ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿ ಇತ್ಯಾದಿ ಸಂಸ್ಥೆಗಳು ಜೀವವಿವೈಧ್ಯತೆೆ ತಾಣಗಳನ್ನು ಉಳಿಸಿಕೊಳ್ಳಲು ಶ್ರಮಿ ಸುತ್ತಿವೆ. ಭಾರತದಲ್ಲಿ ಅರಣ್ಯಗಳ ನಾಶ ಮತ್ತು ಜೈವಿಕ ತಾಣಗಳನ್ನು ನಿಯಂತ್ರಿಸಲು CAMPA ಆ್ಯಕ್ಟ್ ಅನ್ನು ಸ್ಥಾಪಿಸಲಾಗಿದೆ.

ಬ್ರಿಟಿಷ್ ಜೀವಶಾಸ್ತ್ರಜ್ಞರು 1988ರಲ್ಲಿ ‘‘ಜೀವವೈವಿಧ್ಯ ಜಾಲತಾಣ’’ಎಂಬ ಹೆಸರನ್ನು ನೀಡಿ, 1990ರಲ್ಲಿ 8 ಮೆಡಿಟರೇನಿಯನ್ ಮಾದರಿಯ ಪರಿಸರ ವ್ಯವಸ್ಥೆಗಳನ್ನು ಸೇರಿಸಿ 1996ರಲ್ಲಿ ವ್ಯಾಪಕ ಜಾಗತಿಕ ವಿಮರ್ಶೆಯನ್ನು ಕೈಗೊಂಡಿದ್ದರು. ಜೀವವಿವೈಧ್ಯತೆೆಯ ದೃಷ್ಟಿಯಿಂದ ಭಾರತ ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ನೈಸರ್ಗಿಕ ವ್ಯತ್ಯಾಸದೊಂದಿಗೆ ಜನಸಂಖ್ಯಾಶಾಸ್ತ್ರದಲ್ಲಿ ಕೂಡ ಪ್ರತಿಫಲಿಸುತ್ತದೆ. ಭೂಮಿಯ ಮೇಲಿನ ಜೀವಿವೈವಿಧ್ಯತೆಯ ಮೇಲೆ ಜನಸಮುದಾಯಗಳು ಅನೇಕ ರೀತಿಯಲ್ಲಿ ಅವಲಂಬಿಸಿವೆ. ಇದೇ ಸಮಯದಲ್ಲಿ ಭಾರತದ ಅತಿಯಾದ ಜನಸಂಖ್ಯೆ ಜೀವವೈವಿಧ್ಯತೆ ಮೇಲೆ ಬದುಕುಳಿಯುವ ಒತ್ತಡಕ್ಕೆ ಕಾರಣವಾಗಿದೆ. 

ಜಗತ್ತಿನಲ್ಲಿ ಭಾರತಕ್ಕೆ ಹೋಲಿಸಿದರೆ ಆಫ್ರಿಕಾ ಖಂಡ ಮಾತ್ರ ಭಾಷೆಗಳು, ಆನುವಂಶಿಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ದೊಡ್ಡ ದಾಗಿದೆ. ಭಾರತದ ಅಪಾರ ಜನಸಂಖ್ಯೆಯಿಂದ ಜೀವವೈವಿಧ್ಯತೆಯ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ಬೀರಿವೆ. ಒಳ್ಳೆಯದೆಂದರೆ ಜನಸಮುದಾಯಗಳ ವೈವಿಧ್ಯತೆಯಿಂದ ವಿವಿಧ ಸಂಪ್ರದಾಯ ಮತ್ತು ಆಚರಣೆಗಳಿಂದ ಸಸ್ಯಗಳು ಮತ್ತು ಪ್ರಾಣಿಗಳನ್ನು ಪವಿತ್ರವೆಂದು ಪೂಜೆ ಮಾಡಿ ಉಳಿಸಿಕೊಳ್ಳುವುದು. ಕೆಟ್ಟದ್ದಂದರೆ ಹೆಚ್ಚು ಜನಸಂಖ್ಯೆಯಿಂದ ಸಂಪನ್ಮೂಲಗಳ ಮೇಲೆ ಅಗಾಧ ಒತ್ತಡ ಉಂಟಾಗುತ್ತಿರುವುದು. 

ದೇಶದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳು ಮುಂಗಾರು/ ಹಿಂಗಾರು ಮಳೆಮಾರುತಗಳ ಆವರ್ತಕ ಪರಿಣಾಮದಿಂದ ಹೆಚ್ಚು ಮಳೆಯನ್ನು ಪಡೆಯುತ್ತವೆ. ಈ ಪ್ರದೇಶಗಳು ತೇವಾಂಶವುಳ್ಳ ಇಳಿಜಾರು ಕಾಡು ಮತ್ತು ಮಳೆಕಾಡುಗಳಿಂದ ಕೂಡಿವೆ. ಉನ್ನತ ಜಾತಿಯ ಜೀವವೈವಿಧ್ಯತೆ ಮತ್ತು ಉನ್ನತ ಮಟ್ಟದ ಸ್ಥಳೀಯತೆಯನ್ನು ಹೊಂದಿವೆ. ಇಲ್ಲಿರುವ ಸುಮಾರು ಶೇ.77ಉಭಯಚರಗಳು, ಶೇ.62 ಸರೀಸೃಪ ಜಾತಿಗಳು ಬೇರೆ ಯಾವ ಜೀವತಾಣದಲ್ಲೂ ಕಂಡುಬರು ವುದಿಲ್ಲ. ಭಾರತಕ್ಕೆ ದಕ್ಷಿಣದಲ್ಲಿರುವ ಶ್ರೀಲಂಕಾ ಕೂಡ ಇದೇ ರೀತಿಯ ಜೀವವೈವಿಧ್ಯತೆಯನ್ನು ಹೊಂದಿದೆ. 

ಸುಮಾರು 6,000 ಜಾತಿಯ ಸಸ್ಯಗಳು ಇಲ್ಲಿದ್ದು ಅವುಗಳಲ್ಲಿ 3,000 ಸ್ಥಳೀಯ ಜಾತಿಯ ಸಸ್ಯಗಳಿವೆ. ಈಗ ವಿಶ್ವದಾದ್ಯಂತ ಹರಡಿಕೊಂಡಿ ರುವ ಕಪ್ಪು ಮೆಣಸು, ಏಲಕ್ಕಿಯ ಮೂಲ ಪಶ್ಚಿಮ ಘಟ್ಟಗಳೇ ಆಗಿವೆ. ದಕ್ಷಿಣದ ಅಗಾಸ್ತ್ಯಮಲೈ ಬೆಟ್ಟಗಳಲ್ಲಿ ಹೆಚ್ಚು ಜೀವವೈವಿಧ್ಯತೆ ಇದ್ದು 450 ಪಕ್ಷಿ ಜಾತಿಗಳು, 140 ಸಸ್ತನಿ ಪ್ರಾಣಿಗಳು, 260 ಸರೀಸೃಪಗಳು ಮತ್ತು 175 ಉಭಯಚರಗಳು ಇಲ್ಲಿವೆ. ಈಗ ಜೀವವೈವಿಧ್ಯತೆ ತೀವ್ರ ಬೆದರಿಕೆಗೆ ಸಿಲುಕಿಕೊಂಡಿದೆ. ಮೂಲವಾಗಿ 1,90,000 ಚ.ಕಿ.ಮೀ. ವಿಸ್ತೀರ್ಣದಲ್ಲಿದ್ದ ಸಸ್ಯವರ್ಗ ಈಗ 1,43,000 ಚ.ಕಿ.ಮೀ.ಗೆ ಕುಗ್ಗಿದೆ. ಶ್ರೀಲಂಕಾದಲ್ಲಿ ಕೇವಲ ಶೇ.1.5 ಅರಣ್ಯ ಮಾತ್ರ ಉಳಿದುಕೊಂಡಿದೆ. 

ಪೂರ್ವ ಹಿಮಾಲಯ ಜೀವವೈವಿಧ್ಯ ತಾಣಗಳಲ್ಲಿ 163 ಜಾತಿ ಪ್ರಾಣಿಗಳಿದ್ದು ಅವುಗಳಲ್ಲಿ ಒಂದು ಕೊಂಬಿನ ಖಡ್ಗಮೃಗ, ನೀರೋತಿ, ಏಶ್ಯದ ನೀರೆಮ್ಮೆ, 45 ಸಸ್ತನಿಗಳು, 50 ಹಕ್ಕಿಗಳು, 17 ಸರೀಸೃಪಗಳು, 12 ಉಭಯಚರಗಳು, 3 ಅಕಶೇರುಕಗಳು ಮತ್ತು 36 ಸಸ್ಯ ಜಾತಿಗಳು ಸೇರಿವೆ. ಸುಮಾರು 10,000 ಜಾತಿಯ ಸಸ್ಯಗಳಿವೆ, ಅದರಲ್ಲಿ 3/1 ಭಾಗ ಸ್ಥಳೀಯ ಮತ್ತು ವಿಶ್ವದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಕೆಲವು ಸಸ್ಯಗಳ ಜೊತೆಗೆ ಎರ್ಮನಿಯಾ ಸಸ್ಯಜಾತಿ ವಾಯವ್ಯ ಹಿಮಾಲಯದಲ್ಲಿ 6,300 ಮೀ.ಗಳ ಎತ್ತರದಲ್ಲಿ ಈಗಲೂ ಉಳಿದು ಕೊಂಡಿದೆ. ಹಿಮಾಯನ್ ಕ್ವಿಲ್, ಚೀರ್ ಫೆಸಂಟ್, ಪಾಶ್ಚಾತ್ಯ ಟ್ರೋಗೋಪಾನ್ಗಳು ಮತ್ತು ಹಿಮಾಲಯನ್ ರಣಹದ್ದುಗಳು, ಬಿಳಿ ಹೊಟ್ಟೆಯ ನಾರಾಯಣಿ ಪಕ್ಷಿ ಎಲ್ಲವೂ ಅಳಿವಿನ ಅಂಚಿನಲ್ಲಿವೆ. 

ಕಳೆದ 30 ವರ್ಷಗಳಿಂದ ಜೀವವೈವಿಧ್ಯತೆಯನ್ನು ಆಚರಣೆ ಮಾಡುವ ಮೂಲಕ ಸಮರ್ಥನೀಯ ಕೃಷಿಕಾಳಜಿ, ಮರುಭೂಮಿ, ಭೂಮಿಯ ಅವನತಿ ಮತ್ತು ಬರ; ನೀರು-ನೈರ್ಮಲ್ಯ; ಆರೋಗ್ಯ-ಸುಸ್ಥಿರ ಅಭಿವೃದ್ಧಿ; ವಿಜ್ಞಾನ-ತಂತ್ರಜ್ಞಾನ, ಸಾಮರ್ಥ್ಯ ನಿರ್ಮಾಣ; ನಗರಗಳ ಸ್ಥಿತಿಸ್ಥಾಪಕತ್ವ- ರೂಪಾಂತರ; ಸಮರ್ಥನೀಯ ಸಾರಿಗೆ; ಹವಾಮಾನ ಬದಲಾವಣೆ, ವಿಪತ್ತು ಅಪಾಯ ಕಡಿತ; ಸಾಗರಗಳು; ಅರಣ್ಯಗಳು; ಸ್ಥಳೀಯ ಜನರ- ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಜೀವವೈವಿಧ್ಯತೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದನ್ನು ತಿಳಿಸುತ್ತಾ ಬಂದಿದೆ.

Similar News

ಜಗದಗಲ
ಜಗ ದಗಲ