ಖಾಲಿ ಆಸನ ಮೀಸಲಿರಿಸಿ ತೀಸ್ತಾ ಸೆಟಲ್ವಾಡ್‌ಗೆ ಗೌರವ

ಅಂತರ್‌ರಾಷ್ಟ್ರೀಯ ಲೇಖಕರ ಶಾಂತಿ ಸಮಾವೇಶ

Update: 2023-05-22 17:47 GMT

ಹೊಸದಿಲ್ಲಿ, ಮೇ 22: ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಲೇಖಕಿ ತೀಸ್ತಾ ಸೆಟಲ್ವಾಡ್ ಅವರಿಗೆ ಸ್ಲೋವೇನಿಯಾದ ಬ್ಲೆಡ್ ಪಟ್ಟಣದಲ್ಲಿ ಈ ವಾರ ನಡೆದ 55ನೇ ಇಂಟರ್‌ನ್ಯಾಷನಲ್ ರೈಟರ್ಸ್ ಫಾರ್ ಪೀಸ್ ಮೀಟಿಂಗ್‌ನಲ್ಲಿ ಖಾಲಿ ಆಸನ ಮೀಸಲಿರಿಸಿ ಗೌರವಿಸಲಾಯಿತು. ಮುಕ್ತ ವಾಕ್ ಸ್ವಾತಂತ್ರ ಪ್ರತಿಪಾದಿಸುವ ಜಾಗತಿಕ ಸಂಘಟನೆಯಾದ ಪೆನ್ (ಪಿಇಎನ್) ಇಂಟರ್‌ನ್ಯಾಷನಲ್ ಈ ಕಾರ್ಯಕ್ರಮ ಆಯೋಜಿಸಿತ್ತು. 

ಪ್ರಸಕ್ತ ಜೈಲುವಾಸ ಅನುಭವಿಸುತ್ತಿರುವ, ಕಾನೂನುಕ್ರಮ ಎದುರಿಸುತ್ತಿರುವ ಅಥವಾ ನಾಪತ್ತೆಯಾಗಿರುವ ಲೇಖಕರಿಗೆ ಖಾಲಿ ಆಸನೞಮೀಸಲಿರಿಸುವ ಮೂಲಕ ಸಾಂಪ್ರದಾಯಿಕವಾಗಿ ಈ ಸಂಘಟನೆ ಗೌರವಿಸುತ್ತದೆ. 4ನೇ ಆಸನ ತೀಸ್ತಾ ಸೆಟಲ್ವಾಡ್‌ಗೆ ಮೀಸಲಿರಿಸಲಾಗಿತ್ತು. ಜಗತ್ತಿನಾದ್ಯಂತದ ಲೇಖಕರು ಹಾಗೂ ಹಕ್ಕುಗಳ ಪ್ರತಿಪಾದಕರಿಗೆ ಸ್ಲೋವೇನಿಯಾದಲ್ಲಿ ಪೆನ್ ಇಂಟರ್‌ನ್ಯಾಷನಲ್ 7 ಖಾಲಿ ಆಸನಗಳನ್ನು ಇರಿಸಿತ್ತು. ಅದರಲ್ಲಿ ಒಂದನ್ನು ನನಗೆ ಮೀಸಲಿರಿಸಿರುವುದರಿಂದ ಭಾವುಕನಾಗಿದ್ದೇನೆ ಎಂದು ತೀಸ್ತಾ ಸೆಟಲ್ವಾಡ್ ಟ್ವೀಟ್ ಮಾಡಿದ್ದಾರೆ. ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದ ಕುರಿತಂತೆ ಸೆಟಲ್ವಾಡ್ ಅವರು ಉಗ್ರ ಟೀಕಾಕಾರರಾಗಿದ್ದಾರೆ.

ಈ ಹತ್ಯಾಕಾಂಡದಲ್ಲಿ ಸಂತ್ರಸ್ತರಾದವರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸೆಟಲ್ವಾಡ್ ಅವರು ಕಳೆದ ಎರಡು ದಶಕಗಳಿಂದ ಬೆಂಬಲ ನೀಡುತ್ತಿ ದ್ದಾರೆ. ಗುಜರಾತ್ ಹತ್ಯಾಕಾಂಡ ದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾರ್ಯರ್ಕತರ ಪಾತ್ರವನ್ನು ಬಹಿರಂಗಪಡಿಸಲು ಕೂಡ ಅವರು ಪ್ರಯತ್ನಿಸುತ್ತಿದ್ದಾರೆ.

Similar News