ಗರಿಷ್ಠ ವಾಯುಮಾಲಿನ್ಯ ಹೊಂದಿರುವ ಜಗತ್ತಿನ 20 ನಗರಗಳಲ್ಲಿ ಭಾರತದ 15 ನಗರಗಳು

ಪಾಕಿಸ್ತಾನದ ಲಾಹೋರ್‌ ಗೆ ಮೊದಲ ಸ್ಥಾನ

Update: 2023-06-06 15:55 GMT

ಹೊಸದಿಲ್ಲಿ: ಸ್ವಿಸ್‌ ಸಂಸ್ಥೆ ಐಕ್ಯುಏರ್‌ ಹೊರತಂದ ವಾರ್ಷಿಕ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿರುವ ಜಗತ್ತಿನ 20 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ 15 ನಗರಗಳು ಭಾರತದಲ್ಲಿವೆ.

ವಾಯು ಮಾಲಿನ್ಯ ಸೂಚ್ಯಂಕ 2022ರಲ್ಲಿ ಭಾರತದ ಸ್ಥಿತಿ ಚೆನ್ನಾಗಿಲ್ಲ. ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದ್ದು ಕಳೆದ ವರ್ಷಕ್ಕಿಂತ ಮೂರು ಸ್ಥಾನಗಳಷ್ಟು ಕುಸಿತ ಕಂಡಿದೆ. ಉಳಿದಂತೆ ಚಾಡ್‌, ಇರಾಕ್‌, ಪಾಕಿಸ್ತಾನ, ಬಹರೈನ್‌ ಮತ್ತು ಬಾಂಗ್ಲಾದೇಶ ಅತ್ಯಂತ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ದೇಶಗಳಾಗಿವೆ.

ಜಗತ್ತಿನ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿರುವ 20 ನಗರಗಳು:

1) ಲಾಹೋರ್, ಪಾಕಿಸ್ತಾನ

2) ಹೊಟಾನ್, ಚೀನಾ

3) ಭಿವಂಡಿ, ಭಾರತ

4) ದೆಹಲಿ, ಭಾರತ

5) ಪೇಶಾವರ, ಪಾಕಿಸ್ತಾನ

6) ದರ್ಭಾಂಗ್, ಭಾರತ

7) ಅಸೋಪುರ್, ಭಾರತ

8) ಎನ್'ಜಮೆನಾ, ಚಾಡ್

9) ಹೊಸದಿಲ್ಲಿ, ಭಾರತ

10) ಪಾಟ್ನಾ, ಭಾರತ

11) ಘಾಜಿಯಾಬಾದ್, ಭಾರತ

12) ಧರುಹೆರಾ, ಭಾರತ

13) ಬಾಗ್ದಾದ್, ಇರಾಕ್

14) ಚಾಪ್ರಾ, ಭಾರತ

15) ಮುಝಫರ್‌ನಗರ, ಭಾರತ

16) ಫೈಸಲಾಬಾದ್, ಭಾರತ

17) ಗ್ರೇಟರ್ ನೋಯ್ಡಾ, ಭಾರತ

18) ಬಹದ್ದೂರ್‌ಘಡ, ಭಾರತ

19) ಫರಿದಾಬಾದ್, ಭಾರತ

20) ಮುಝಫ್ಫರ್‌ಪುರ್, ಭಾರತ

Similar News