ಇಂಫಾಲ: ಹಿಂಸೆಗೆ ತಿರುಗಿದ ಪ್ರತಿಭಟನೆ; ಕರ್ಫ್ಯೂ ಉಲ್ಲಂಘಿಸಿದ ಜನ, ಮನೆಗಳಿಗೆ ಬೆಂಕಿ

ಪೊಲೀಸರೊಂದಿಗೆ ಘರ್ಷಣೆ

Update: 2023-06-15 15:32 GMT

ಇಂಫಾಲ: ಕರ್ಫ್ಯೂ ಹೇರಿಕೆಯ ಹೊರತಾಗಿಯೂ ಮಣಿಪುರ ರಾಜಧಾನಿ ಇಂಫಾಲದಲ್ಲಿ ಪ್ರತಿಭಟನಕಾರರು ಗುರುವಾರ ಪೊಲೀಸರೊಂದಿಗೆ  ಘರ್ಷಣೆಗಿಳಿದಿದ್ದು, ಕೆಲವರಿಗೆ ಗಾಯಗಳಾಗಿವೆ. ಹಿಂಸಾಚಾರದ ವೇಳೆ ಕೆಲವು ಮನೆಗಳಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

‌ಮಣಿಪುರದ ಖಾಮೆನ್ಲೊಕ್ ಗ್ರಾಮದಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾದ ಘಟನೆಯನ್ನು ಖಂಡಿಸಿ ನೂರಾರು ಜನರು ಇಂಫಾಲದಲ್ಲಿ ಕರ್ಫೂ ಉಲ್ಲಂಘಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಇಂಫಾಲದ  ‘ನ್ಯೂಚೆಕೊನ್’ ವಸತಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ ಪ್ರಯೋಗಿಸಿದ್ದಾರೆ. 

 ಹಿಂಸಾಚಾರದ ವೇಳೆ ಹೊತ್ತಿ ಉರಿಯುತ್ತಿರುವ ಮನೆಯ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಪ್ರಯತ್ನಿಸುತ್ತಿರುವ ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ  ಪ್ರಸಾರವಾಗಿದೆ.

Similar News