ಮಕ್ಕಳನ್ನು ನೈತಿಕವಾಗಿ ಸದೃಢಗೊಳಿಸಿ: ಮೌಲಾನಾ ಹಾಮಿದ್ ಉಮ್ರಿ

Update: 2024-08-24 05:34 GMT

ಬಾಗಲಕೋಟೆ: "ಮಕ್ಕಳು ಈ ಸಮಾಜದ ಆಸ್ತಿ ಯಾಗಿದ್ದಾರೆ. ತಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಚಾರಿತ್ಯವಂತರನ್ನಾಗಿ ಅವರನ್ನು ಸದೃಢಗೊಳಿಸಬೇಕು. ಮಕ್ಕಳು ದೇವನ ಬಹಳ ದೊಡ್ಡ ಅನುಗ್ರಹ. ಅವರ ಬೆಳವಣಿಗೆಯಲ್ಲಿ ಹೆತ್ತವರು ನಿರ್ಣಾಯಕ ಪಾತ್ರ ವಹಿಸಬೇಕು" ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮ್ರಿ ಹೇಳಿದರು.

ಇತ್ತೀಚೆಗೆ ನಗರದ ಅಬುಲ್ ಕಲಾಂ ಆಝಾದ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಅಂಬೇಡ್ಕರ್ ಭವನ ನವನಗರದಲ್ಲಿ ಹಮ್ಮಿಕೊಂಡ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

 ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಇದರ ಕಾರ್ಯದರ್ಶಿ ರಿಯಾಝ್ ಅಹ್ಮದ್ ತಮ್ಮ ಪ್ರಾಸ್ತಾವಿಕ ಭಾಷಣ ಮಾಡುತ್ತಾ, " ನಮ್ಮ ಮಕ್ಕಳನ್ನು ಒಬ್ಬ ಡಾಕ್ಟರ್ ಅಥವಾ ಇಂಜಿನಿಯರ್ ಆಗಿ ರೂಪಿಸುವುದಕ್ಕಿಂತ ಮೊದಲು ಒಬ್ಬ ಉತ್ತಮ ಸದ್ಗುಣವಂತ ವ್ಯಕ್ತಿಯನ್ನಾಗಿ ಈ ಸಮಾಜಕ್ಕೆ ನೀಡಬೇಕು" ಎಂದರು.

ಕಾರ್ಯಕ್ರಮವು ಕುರ್ ಆನ್ ಪಠಣದೊಂದಿಗೆ ಪ್ರಾರಂಭಗೊಂಡಿತು. ಕೊನೆಯಲ್ಲಿ ಅಲ್ ಇಸ್ಲಾಹ್ ಟ್ರಸ್ಟ್ ನ ಚೇರ್ಮನ್ ಜ. ಅಬ್ದುಲ್ ರವೂಫ್ ರವರು ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಜ.ಮೆಹಬೂಬ್ ಆಲಂ ಬಡಗನ್ ವಲಯ ಸಂಚಾಲಕರು, ಜ.ಇ ಹಿಂದ್ ಬಾಗಲಕೋಟೆ ಅಧ್ಯಕ್ಷ ಜ. ಆಸಿಫ್ ಮುದಗಲ್, ನವನಗರ ಸ್ಥಾನೀಯ ಅಧ್ಯಕ್ಷ ಮುಹಮ್ಮದ್ ಯೂಸುಫ್ ಕೇಸನೂರ್ , ಮುಂತಾದವರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News