ಶಿಕ್ಷಣವೆಂದರೆ ಕೇವಲ ಓದು-ಬರಹ ಮಾತ್ರವಲ್ಲ ಜೀವನದ ಮೌಲ್ಯ, ಸಂಸ್ಕಾರ ಕಲಿತು ಬದುಕುವುದಾಗಿದೆ: ಮುಹಮ್ಮದ್ ತಾಜುದ್ದೀನ್

Update: 2024-08-19 16:40 GMT

ಇಲಕಲ್ಲ : "ಶಿಕ್ಷಣವೆಂದರೆ ಕೇವಲ ಓದು, ಬರಹ ಮಾತ್ರ ಕಲಿಯುವುದಲ್ಲ ಅದರ ಜೊತೆಗೆ ಜೀವನದ ಮೌಲ್ಯ ಹಾಗೂ ಸಂಸ್ಕಾರಗಳನ್ನು ಕಲಿತು ಅದರಂತೆ ಬದುಕುವುದಾಗಿದೆ" ಎಂದು ಇಲಕಲ್ಲ ಅಂಜುಮನ್ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷರಾದ ಮುಹಮ್ಮದ್ ತಾಜುದ್ದೀನ್ ಹುಮ್ನಾಬಾದ್ ಹೇಳಿದರು.

ಅವರು ಇತ್ತೀಚಿಗೆ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಇಲಕಲ್ಲ ಸೆಂಟರ್ ವತಿಯಿಂದ ಸ್ಥಳೀಯ ಅಂಜುಮನ್ ಎಸ್ಎಂಎಸ್ ಖಾದ್ರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮುಖ್ಯ ಅತಿಥಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮಾತನಾಡುತ್ತಾ "ಮೌಲ್ಯಾಧಾರಿತ ಶಿಕ್ಷಣ ಇಂದಿನ ಎಲ್ಲ ಕೆಡುಕುಗಳಿಗೆ ಪರಿಹಾರವಾಗಿದೆ" ಎಂದು ಹೇಳಿದರು.

ಬಡಗನ್ ವಲಯ ಸಂಚಾಲಕರಾದ ಮೆಹಬೂಬ್ ಆಲಂ ತಮ್ಮ ಭಾಷಣದಲ್ಲಿ ಬೋರ್ಡ್ ನ ಕಾರ್ಯವನ್ನು ಶ್ಲಾಘಿಸುತ್ತ ಇದರ ಸಂದೇಶವನ್ನು ಮನೆಮನೆಗೂ ತಲುಪಿಸಲು ಕರೆ ನೀಡಿದರು.

ಈ ಸಂದರ್ಭ ಎಸ್ಎಂಎಸ್ ಖಾದ್ರಿ ಶಾಲೆಯ ಕಾರ್ಯದರ್ಶಿಗಳಾದ ಮುಹಿಯುದ್ದೀನ್ ಬಾದಶಾ ಹುಣುಚಗಿ, ಅಬ್ದುಲ್ ಕರೀಂ ಬಡಗನ್, ಮೌಲಾನಾ ಫಾರೂಕ್ ಉಮ್ರಿ ಮುಂತಾದರು ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News