ದೇವಸ್ಥಾನದ ಕಾರ್ಯಕ್ರಮದಲ್ಲಿ ವಕ್ಫ್‌ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಯತ್ನಾಳ್‌ಗೆ ಸಾರ್ವಜನಿಕರಿಂದ ತರಾಟೆ

Update: 2024-11-11 11:19 GMT

ಬಾಗಲಕೋಟೆ : ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ʼವಕ್ಫ್‌ ವಿಚಾರʼ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಯತ್ನಾಳ್‌ಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣ ನಡೆದಿದೆ.

ಪಟ್ಟಣದ ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತ್ನಾಳ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಯತ್ನಾಳ್‌ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಜನರು ತಕರಾರು ಎತ್ತಿದ್ದಾರೆ. ʼನೀವು ಇಲ್ಲಿ ರಾಜಕಾರಣ ಮಾಡಲು ಬರಬೇಡಿʼ ಎಂದು ಜನರು ನೇರವಾಗಿ ಹೇಳಿದ್ದಾರೆ.

ʼಇದು ಯಾವ ಕಾರ್ಯಕ್ರಮ ನೀವು ಏನು ಮಾತಾಡುತ್ತಿದ್ದೀರಿ. ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯವರು ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು ಆರು ಲಕ್ಷ ರೂ.ದೇಣಿಗೆ ಕೊಟ್ಟಿದ್ದಾರೆ. ಇದು ರಾಜಕೀಯ ಮಾತಾನಾಡುವ ಜಾಗ ಅಲ್ಲʼ ಎಂದು ಯತ್ನಾಳ್‌ ರನ್ನು ನೆರೆದಿದ್ದ ಜನರು ತರಾಟೆ ತೆಗೆದುಕೊಂಡರು.

ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಯತ್ನಾಳ್‌ ವೇದಿಕೆಯಿಂದ ಇಳಿದು ಹೋಗಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News