ಬಾಗಲಕೋಟೆ | ಮೌಲಾನಾ‌ ಮೇಲೆ ಯುವಕರಿಂದ ಹಲ್ಲೆ ಆರೋಪ : ಇಬ್ಬರು ಪೊಲೀಸ್‌ ವಶಕ್ಕೆ

Update: 2024-08-19 07:44 GMT
ಬಾಗಲಕೋಟೆ | ಮೌಲಾನಾ‌ ಮೇಲೆ ಯುವಕರಿಂದ ಹಲ್ಲೆ ಆರೋಪ : ಇಬ್ಬರು ಪೊಲೀಸ್‌ ವಶಕ್ಕೆ
  • whatsapp icon

ಬಾಗಲಕೋಟೆ : ನವನಗರ ಸೆಕ್ಟರ್ 4ರಲ್ಲಿ ಟೀ ಕುಡಿಯುತ್ತಿದ್ದ ವೇಳೆ ಮೌಲಾನಾ‌ ಒಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದ್ದು, ಮೌಲಾನಾ ಮೇಲೆ ಹಲ್ಲೆ‌ ನಡೆದಿರುವ ವಿಷಯ ವ್ಯಾಪಕವಾಗಿ ಹರಡುತ್ತಿದ್ದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನವನಗರ ಠಾಣೆ ಎದುರು ಮುಸ್ಲಿಮರು ಜಮಾವಣೆಗೊಂಡಿದ್ದರು.

ಹಲ್ಲೆಕೋರರ ಮೇಲೆ ಕೂಡಲೇ ಪ್ರಕರಣ ದಾಖಲಿಸಿ ಅವರನ್ನೆಲ್ಲ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್, ಕಾರ್ತಿಕ್, ಶಿವು, ಆದಿತ್ಯ ಸೇರಿ ಹಲವರ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಕಾರ್ತಿಕ್ ಮತ್ತು ಪ್ರೀತಮ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ನಾಗರಾಜನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News