ಆನೇಕಲ್ | ಕಲ್ಯಾಣಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು
Update: 2025-02-09 12:42 IST

ಮೃತ ವಿದ್ಯಾರ್ಥಿಗಳು
ಆನೇಕಲ್ : ಈಜಲು ಹೋದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ನಿನ್ನೆ(ಶನಿವಾರ) ನಡೆದಿದೆ.
ಮೃತರನ್ನು ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ದೀಪು (20) ಮತ್ತು ಯೋಗಿಶ್ವರನ್ (20) ಎಂದು ಗುರುತಿಸಲಾಗಿದೆ. ಈಜಲು ಹೋದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ನೋಡನೋಡುತ್ತಿದಂತೆ ನೀರುಪಾಲಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಕೊನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೊಮ್ಮಸಂಸ್ರದ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿಗೆ ತೆರಳಿದ್ದಾರೆ. ಬಳಿಕ ಕಲ್ಯಾಣಿಗೆ ಈಜಲು ಇಳಿದಿದ್ದಾರೆ. ಈ ಪೈಕಿ ದೀಪು, ಯೋಗೇಶ್ವರ್ಗೆ ಈಜಲು ಆಗದೆ ಪರದಾಡಿದ್ದಾರೆ. ಪರಿಣಾಮ ಇಬ್ಬರು ಕೂಡ ನೀರಿನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.