ಬೆಂಗಳೂರು | ಮಹಿಳಾ ಡಿವೈಎಸ್ಪಿ ಜತೆ ಸೇರಿ ಹಲ್ಲೆ ಆರೋಪ: ಎಸಿಪಿ ವಿರುದ್ಧ ಪತ್ನಿ ದೂರು

Update: 2025-02-13 19:07 IST
ಬೆಂಗಳೂರು | ಮಹಿಳಾ ಡಿವೈಎಸ್ಪಿ ಜತೆ ಸೇರಿ ಹಲ್ಲೆ ಆರೋಪ: ಎಸಿಪಿ ವಿರುದ್ಧ ಪತ್ನಿ ದೂರು
  • whatsapp icon

ಬೆಂಗಳೂರು: ಮಹಿಳಾ ಡಿವೈಎಸ್ಪಿ ಜತೆ ಸೇರಿ ಪತಿ ಹಲ್ಲೆ ಮಾಡಿದ್ದರೆಂದು ಆರೋಪಿಸಿ ಎಸಿಬಿ ಶ್ರೇಣಿಯ ಪೊಲೀಸ್ ಅಧಿಕಾರಿ ವಿರುದ್ಧ ಪತ್ನಿ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಹಾಗೂ ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ವಿರುದ್ಧ ಅಮೃತಾ ಎಂಬಾಕೆ ದೂರು ಸಲ್ಲಿಕೆ ಮಾಡಿದ್ದಾರೆ. ಗೋವರ್ಧನ್, ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ಜೊತೆ ಸಂಪರ್ಕದಲ್ಲಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಅಮೃತಾ, ಗೋವರ್ಧನ್ ಪೋಷಕರಿಗೂ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ, ಸೀಮೆಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News