ಕೆಎಸ್ಸಾರ್ಟಿಸಿ ಸಿಬ್ಬಂದಿಗಳ ಬಾಕಿ ಮೊತ್ತ ಪಾವತಿಸಲು 84 ಕೋಟಿ ರೂ.ಮಂಜೂರು

Update: 2024-03-16 16:17 GMT

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್ಸಾರ್ಟಿಸಿ) ಸಿಬ್ಬಂದಿಗಳ ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಪಾವತಿಸಲು ಒಟ್ಟು 84 ಕೋಟಿ ರೂ.ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಜೂರು ಮಾಡಿದ್ದಾರೆ.

ಸಂಸ್ಥೆಯ ಸಿಬ್ಬಂದಿಗಳಿಗೆ (ಸದರಿ ಅವಧಿಯಲ್ಲಿನ ನಿವೃತ್ತ ಸಿಬ್ಬಂದಿಗಳನ್ನು ಸೇರಿ) 2022-23 ಮೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತ 24 ಕೋಟಿ ರೂ.ಗಳನ್ನು ಹಾಗೂ ಜುಲೈ-2022ರಿಂದ ನವೆಂಬರ್-2022ರ ಮಾಹೆಯ 5 ತಿಂಗಳು, ಜನವರಿ-2023ರಿಂದ ಜುಲೈ-2023ರವರೆಗಿನ 7 ತಿಂಗಳು ಮತ್ತು ಜುಲೈ-2023ರಿಂದ ಅಕ್ಟೋಬರ್-2023 ರವರೆಗಿನ 4 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ ರೂ. 54 ಕೋಟಿಯನ್ನು ಪಾವತಿಸಲು ಆದೇಶಿಸಲಾಗಿದೆ.

ಜನವರಿ-2024ರಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿಗಳ ಉಪಧನ 6 ಕೋಟಿ ರೂ. ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂದು ಸಂಸ್ಥೆಯ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News