ಹತ್ತು ಮತಗಟ್ಟೆಗಳನ್ನು ಕೈಬಿಟ್ಟ ಬಿಬಿಎಂಪಿ
Update: 2024-10-22 16:25 GMT
ಬೆಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆ-2025ರ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತಗಟ್ಟೆಗಳ ಪುನರ್ ವಿಂಗಡಣೆ ಮಾಡಿದ್ದು, 10 ಮತಗಟ್ಟೆಗಳನ್ನು ಕೈ ಬಿಡಲಾಗಿದೆ ಎಂದು ಬಿಬಿಎಂಪಿಯ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ 8,982 ಮತಗಟ್ಟೆಗಳಿದ್ದು, ಪರಿಷ್ಕರಣೆಯಾದ ನಂತರ 8972 ಮತಗಟ್ಟೆಗಳನ್ನು ಮಾಡಲಾಗಿರುತ್ತದೆ. ಈ ಸಂಬಂಧದ ಮಾಹಿತಿಯನ್ನು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ನೀಡಲಾಗಿರುತ್ತದೆ ಎಂದು ಅವರು ಹೇಳಿದರು.
ಈಗ ಪರಿಷ್ಕರಣೆಯಾದ ನಂತರ ಕಡಿಮೆ ಮತದಾರರನ್ನು ಹೊಂದಿರುವಂತಹ 10 ಮತಗಟ್ಟೆಗಳನ್ನು ಕೈಬಿಟ್ಟು, ಆ ಮತಗಟ್ಟೆಗಳಲ್ಲಿನ ಮತದಾರರನ್ನು ಸಮೀಪದ ಮತಗಟ್ಟೆಯ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.