12 ನೇ ಭಾರತ ಒಳಗೊಳ್ಳುವಿಕೆ ಶೃಂಗಸಭೆ 2024

Update: 2024-11-18 08:18 GMT

ಬೆಂಗಳೂರು: ದೇಶಾದ್ಯಂತದ ಚಿಂತಕ ನಾಯಕರು, ಬದಲಾವಣೆಯ ಕಾರಣಕರ್ತರು ಮತ್ತು ಒಳಗೊಳ್ಳುವಿಕೆಯ ಪ್ರತಿಪಾದಕರನ್ನು ಒಂದುಗೂಡಿಸಿದ ಬಹು ನಿರೀಕ್ಷಿತ 12 ನೇ ಭಾರತೀಯ ಒಳಗೊಳ್ಳುವಿಕೆ ಶೃಂಗಸಭೆ (ಐಐಎಸ್) 2024 ರ ನವೆಂಬರ್ 16 ಮತ್ತು 17 ರಂದು ರೋಮಾಂಚಕ ನಗರವಾದ ಬೆಂಗಳೂರಿನಲ್ಲಿ ನಡೆಯಿತು.

ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಲೋಕದಲ್ಲಿ ಸಾಮರ್ಥ್ಯಗಳನ್ನು ಸಂಭ್ರಮಿಸಲು, ಸಂವಾದಗಳನ್ನು ಪೋಷಿಸಲು ಮತ್ತು ಇನ್ನಷ್ಟು ಒಳಗೊಂಡ ಭಾರತಕ್ಕಾಗಿ ಕ್ರಿಯಾಶೀಲ ಪರಿಹಾರಗಳಿಗೆ ವೇಗ ನೀಡಲು ಈ ಮಹತ್ವಾಕಾಂಕ್ಷಿ ಶೃಂಗಸಭೆ ವೇದಿಕೆಯಾಗಿದೆ.

ಮಿಥ್ಯಗಳನ್ನು ತೊಡೆದು ಹಾಕುವುದು, ವೈವಿಧ್ಯತೆಯನ್ನು ಆಲಿಂಗಿಸುವುದು ಮತ್ತು ವ್ಯಕ್ತಿಯ ಸಾಮರ್ಥ್ಯ ಏನೇ ಇರಲಿ, ಪ್ರತಿ ವ್ಯಕ್ತಿಯು ಅಭಿವೃದ್ಧಿ ಹೊಂದಲು ಸಬಲೀಕರಣಗೊಳಿಸಬಲ್ಲ ವಾತಾವರಣವನ್ನು ಸೃಷ್ಟಿಸುವ ಮಹತ್ವವನ್ನು ಒತ್ತಿಹೇಳುವುದು ಈ ಕಾರ್ಯಕ್ರಮದ ಗುರಿಯಾಗಿತ್ತು. ಶೃಂಗಸಭೆಯಲ್ಲಿ ಲಭ್ಯವಾಗಿಸುವಿಕೆ, ಒಳಗೊಂಡ ಶಿಕ್ಷಣ ಮತ್ತು ಉದ್ಯೋಗದಂತಹ ಜ್ವಲಂತ ಸಮಸ್ಯೆಗಳ ಕುರಿತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮತ್ತು ವಿ.ಆರ್ ಫಿರೋಸ್ ಅವರೊಂದಿಗಿನ ಚಿಂತನ-ಪ್ರಚೋದಕ ಕಾರ್ಯಕ್ರಮ ನಡೆಯಿತು. ದಿವ್ಯಾಂಗರ ಸ್ಪೂರ್ತಿದಾಯಕ ಮಾತುಗಳು; ಪದಕ ವಿಜೇತ ಪ್ಯಾರಾ ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರೊಂದಿಗೆ ಪ್ಯಾರಾ ಕ್ರೀಡೆಗಳ ಕುರಿತಾದ ಕಾರ್ಯಕ್ರಮ; ಹೆಸರಾಂತ ಛಾಯಾಗ್ರಾಹಕ ವಿಕ್ಕಿ ರಾಯ್ ಅವರಿಂದ ನಡೆಯುತ್ತಿರುವ ದಿವ್ಯಾಂಗ ಫೋಟೋ ಅಭಿಯಾನದ ಭಾಗವಾಗಿನ ದಿವ್ಯಾಂಗ ವ್ಯಕ್ತಿಗಳ 100 ಕಥೆಗಳನ್ನು ಒಳಗೊಂಡ ಸಿ.ಕೆ. ಮೀನಾ ಅವರು ಸಂಪಾದಿಸಿದ "ಎಲ್ಲರೂ ಯಾವುದರಲ್ಲಾದರೂ ಒಳ್ಳೆಯವರು" ಎಂಬ ಪುಸ್ತಕ ಬಿಡುಗಡೆ; ಕಾರ್ಪೊರೇಟ್ ಸಂಸ್ಥೆಗಳು, ನೀತಿ ನಿರೂಪಕರು ಮತ್ತು ಎನ್ ಜಿ ಒ ಗಳು ಸೇರಿದಂತೆ ಎಲ್ಲಾ ಸಂಬಂಧಿತರಿಗೂ ನೆಟ್ ವರ್ಕಿಂಗ್ ಅವಕಾಶಗಳು ಈ ಶೃಂಗಸಭೆಯ ಮುಖ್ಯ ಕಾರ್ಯಕ್ರಮಗಳಾಗಿದ್ದವು.

ಕಳೆದ 12 ವರ್ಷಗಳಲ್ಲಿ, ಭಾರತೀಯ ಒಳಗೊಳ್ಳುವಿಕೆ ಶೃಂಗಸಭೆಯು ಪರಿವರ್ತಕ ಆಂದೋಲನವಾಗಿ ಹೊರಹೊಮ್ಮಿದ್ದು ನೀತಿ ಬದಲಾವಣೆಗಳ ಮೇಲೆ ಪ್ರಭಾವ ಬೀರುತ್ತಾ ತಳಮಟ್ಟದಲ್ಲಿ ಜಾಗೃತಿಗೆ ಚುರುಕು ನೀಡಿದೆ. ಈ ವರ್ಷದ ಕಾರ್ಯಕ್ರಮದಲ್ಲಿ ದಿವ್ಯಾಂಗರು, ವಕೀಲರು, ಶಿಕ್ಷಣತಜ್ಞರು ಮತ್ತು ಉದ್ಯಮ ನಾಯಕರು ಸೇರಿದಂತೆ 800 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು, ಇದು ದೇಶದ ಅತಿದೊಡ್ಡ ಒಳಗೊಂಡ ಕೂಟವಾಗಿತ್ತು.

ಕಾರ್ಯಕ್ರಮ ಕುರಿತು ಮಾತನಾಡಿದ ಶ್ರೀ ರಾಜೇಶ್ ಅಗರ್ವಾಲ್ ಅವರು, “ಭಾರತೀಯ ಒಳಗೊಳ್ಳುವಿಕೆ ಶೃಂಗಸಭೆಯು ಕೇವಲ ಒಂದು ಕಾರ್ಯಕ್ರಮವಲ್ಲ; ಅದು ಬದಲಾವಣೆಯ ವೇಗವರ್ಧಕವಾಗಿದೆ. ಒಳಗೊಳ್ಳುವಿಕೆಯನ್ನು ಮರುವ್ಯಾಖ್ಯಾನಿಸಲು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಸಮಾನವಾಗಿ ಕಾಣುವ ಸಮಾಜವನ್ನು ನಿರ್ಮಿಸಲು ದೇಶಾದ್ಯಂತದ ವೈವಿಧ್ಯಮಯ ಜನರನ್ನು ಇದು ಒಂದುಗೂಡಿಸಿದೆ.”

ದಿವ್ಯಾಂಗರ ಕಲಾಕೌಶಲ್ಯಗಳ ಜೊತೆಗೆ ಭಾರತದಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉಪಕ್ರಮಗಳು ಮತ್ತು ನಾವಿನ್ಯತೆಯನ್ನು ಶೃಂಗಸಭೆಯು ಪ್ರದರ್ಶಿಸಿತು.

ಕಲಿಕೆಗೆ, ಸಂಪರ್ಕಕ್ಕೆ ಮತ್ತು ಒಳಗೊಂಡ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಲು ಭಾರತೀಯ ಒಳಗೊಳ್ಳುವಿಕೆಯ ಶೃಂಗಸಭೆಯು ಒಂದು ಅವಕಾಶವಾಗಿತ್ತು.



Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News