ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿ ಮಾಡಿದ ವಿದೇಶಾಂಗ ವ್ಯವಹಾರ ಸಚಿವಾಲಯದ ಸೌರಭ್ ಕುಮಾರ್

Update: 2024-01-12 14:17 GMT

ಬೆಂಗಳೂರು: ವಿದೇಶಾಂಗ ವ್ಯವಹಾರಗಳ ಸಚಿವಾಲಯದ(ಯುರೋಪಿಯನ್ ಒಕ್ಕೂಟ, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್ ಭಾರತದ ನಿಯೋಜಿತ ರಾಯಭಾರಿ)ಕಾರ್ಯದರ್ಶಿ ಸೌರಭ್ ಕುಮಾರ್, ಅಪರ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್‍ರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಯುರೋಪಿಯನ್ ನಡುವಿನ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಅಧಿಕಾರಿಗಳಿಬ್ಬರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಭಾರತವು 8.38 ಶತಕೋಟಿ ಯು.ಎಸ್ ಡಾಲರ್ ಮೌಲ್ಯದ ರಫ್ತುಗಳನ್ನು ಹೊಂದಿದೆ. ಅದರಲ್ಲಿ ಕರ್ನಾಟಕವು ಶೇ.5.8 (510 ಮಿಲಿಯನ್ ಯು.ಎಸ್. ಡಾಲರ್) ಪಾಲನ್ನು ಹೊಂದಿದೆ. ಕರ್ನಾಟಕವು ಭಾರತದ ರಫ್ತಿನ ಶೇ.100 ರಫ್ತುಗಳನ್ನು ಬೆಲ್ಜಿಯಂಗೆ ಗೋಡಂಬಿ ಕಾಯಿಚಿಪ್ಪಿನ ದ್ರವ ಮತ್ತು ಮೋಲಾಸಸ್ ರಫ್ತು ಮಾಡುತ್ತದೆ ಮತ್ತು ಶೇ.89ರಷ್ಟು ಕಾಫಿಯನ್ನು ರಫ್ತು ಮಾಡುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಪ್ರಮುಖ ರಫ್ತುದಾರರಾಗಿರುವ ಕರ್ನಾಟಕವು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಿಂದ ಯುರೋಪಿಯನ್ ಒಕ್ಕೂಟಕ್ಕೆ ವಜ್ರ, ಆಹಾರ ಸಂಸ್ಕರಣೆ ಮತ್ತು ವಿವಿಧ ಉತ್ಪನ್ನಗಳ ರಪ್ತಿನ ಬಗ್ಗಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಜಾವೇದ್ ಅಕ್ತರ್, ಗೌರವ್ ಗುಪ್ತಾ, ನಿಲಯ್ ಮಿತಾಶ್, ಶ್ರೀಕರ್ ಮತ್ತು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News