ಗ್ರಾಮ ಪಂಚಾಯತ್‌ ಆದಾಯದಲ್ಲಿ ಸಾರ್ವಕಾಲಿಕ ಹೆಚ್ಚಳ : ಸಚಿವ ಪ್ರಿಯಾಂಕ್ ಖರ್ಗೆ

Update: 2025-04-06 22:07 IST
Photo of Priyank Kharge

ಪ್ರಿಯಾಂಕ್ ಖರ್ಗೆ 

  • whatsapp icon

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಆಡಳಿತದಲ್ಲಿ ಮೌನ ಕ್ರಾಂತಿಯನ್ನು ನಡೆಸುತ್ತಿದ್ದು, ವರ್ಷದಿಂದ ವರ್ಷಕ್ಕೆ ದಾಖಲೆಯ ಆದಾಯ ಸಂಗ್ರಹಣೆಯ ಮೂಲಕ ಪಂಚಾಯತ್ ಆರ್ಥಿಕತೆಯನ್ನು ಬಲಪಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ ಅವರು, 2022–23ನೇ ಸಾಲಿನಲ್ಲಿ ಇಲಾಖೆಯು 571.94 ಕೋಟಿ ರೂ. ಆದಾಯ ಗಳಿಸಿದ್ದರೆ, 2023–24ನೆ ಸಾಲಿನಲ್ಲಿ ಅದು 767.87 ಕೋಟಿ ರೂ.ಗಳಿಗೆ ಏರಿತು. 2024–25 ಸಾಲಿನಲ್ಲಿ ಆದಾಯ ಗರಿಷ್ಠ ಮಟ್ಟ ತಲುಪಿ 1272.43 ಕೋಟಿ ರೂ. ತಲುಪಿದ್ದು, ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆದಾಯ ಸಂಗ್ರಹಣೆಯಲ್ಲಿ ಸಾರ್ವಕಾಲಿಕ ದಾಖಲೆ ಆಗಿದೆ ಎಂದು ಹೇಳಿದ್ದಾರೆ.

18 ತಿಂಗಳುಗಳಲ್ಲಿ, ನಾವು 13,91,678 ಹೊಸ ಆಸ್ತಿಗಳನ್ನು ತೆರಿಗೆ ನೋಂದಣಿ ವ್ಯಾಪ್ತಿಗೆ ತರುವ ಮೂಲಕ ಪಂಚಾಯತ್ ಆಸ್ತಿಗಳನ್ನು 1,43,91,438ಕ್ಕೆ ಹೆಚ್ಚಿಸಿದ್ದೇವೆ. ಗ್ರಾಮೀಣ ಆಸ್ತಿ ನಿರ್ವಹಣಾ ವೇದಿಕೆಯಾದ ಇ-ಸ್ವತ್ತು ಹಾದಿಯಲ್ಲಿ ನಡೆಯುತ್ತಿರುವ ದಿಟ್ಟ ಸುಧಾರಣೆಗಳೊಂದಿಗೆ, ಇನ್ನೂ ಹೆಚ್ಚಿನ ಆದಾಯ ಉತ್ಪಾದನೆಗೆ ವೇದಿಕೆಯನ್ನು ಸಜ್ಜುಗೊಳಿಸುತ್ತಿದ್ದೇವೆ. ತಳಮಟ್ಟದಲ್ಲಿ ಹೆಚ್ಚು ಸ್ಪಂದಿಸುವಂತೆ ಪಂಚಾಯತ್‍ಗಳಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದೇವೆ. ಈ ಮೂಲಕ ಕೇವಲ ಹಳ್ಳಿಗಳನ್ನು ಬಲಪಡಿಸುತ್ತಿಲ್ಲ, ಅದರೊಂದಿಗೆ ರಾಜ್ಯದ ಮುಂದಿನ ಆರ್ಥಿಕ ಇಂಜಿನ್‍ಗಳಿಗೆ ಶಕ್ತಿ ತುಂಬುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News