ಬೆಂಗಳೂರು | 88 ಲಕ್ಷ ರೂ. ವಂಚಿಸಿದ್ದ ಆರೋಪ : 10 ಮಂದಿ ಸೆರೆ

Update: 2024-12-17 17:27 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ವ್ಯಕ್ತಿಯೊಬ್ಬರಿಗೆ 88 ಲಕ್ಷ ರೂ. ವಂಚಿಸಿದ್ದ ಆರೋಪದಡಿ 10 ಮಂದಿಯನ್ನು ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಕಾಶ್, ರವಿಶಂಕರ್, ಪ್ರಕಾಶ್, ಪ್ರಜ್ವಲ್, ಸುನಿಲ್, ಸುರೇಶ್, ಓಬಳ ರೆಡ್ಡಿ, ಮಧುಸೂಧನ್, ಶ್ರೀನಿವಾಸ್ ರೆಡ್ಡಿ ಹಾಗೂ ಕಿಶೋರ್ ಕುಮಾರ್ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.

ಬಂಧಿತರಿಂದ 51 ಮೊಬೈಲ್‍ಗಳು, 27 ಡೆಬಿಟ್ ಕಾರ್ಡ್‍ಗಳು, 108 ಬ್ಯಾಂಕ್ ಪಾಸ್‍ಬುಕ್, 480 ಸಿಮ್ ಕಾರ್ಡ್‍ಗಳು, 48 ಕ್ಯೂಆರ್ ಕೋಡ್, 42 ರಬ್ಬರ್ ಸ್ಟಾಂಪ್‍ಗಳು, 103 ಉದ್ಯಮ್ ಹಾಗೂ ಜೆಎಸ್‍ಟಿ ದಾಖಲಾತಿಗಳು ಹಾಗೂ ಚಾಲ್ತಿಯಿರುವ 230 ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News