ಬೆಂಗಳೂರು | ಮೆಟ್ರೋ ನಿಲ್ದಾಣದಲ್ಲಿ ಅಸಭ್ಯ ವರ್ತನೆ ಆರೋಪ: ಮಹಿಳೆಯಿಂದ ದೂರು

Update: 2024-03-20 12:01 GMT

ಬೆಂಗಳೂರು: ಇಲ್ಲಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಅಸಭ್ಯ ವರ್ತನೆ ತೋರಿರುವ ಘಟನೆ ನಡೆದಿದ್ದು, ಈ ಸಂಬಂಧ ಮೆಟ್ರೋ ಮೇಲಾಧಿಕಾರಿಗಳಿಗೆ ಮಹಿಳೆಯೊಬ್ಬರು ಜಾಲತಾಣ ಮತ್ತು ಇಮೇಲ್ ಮೂಲಕ ದೂರು ಸಲ್ಲಿರುವುದು ವರದಿಯಾಗಿದೆ.

ಮೆಟ್ರೋ ಸಿಬ್ಬಂದಿಯೋರ್ವ ಫ್ಲಾಟ್ ಫಾರ್ಮ್‍ನಲ್ಲೇ ತನ್ನ ಖಾಸಗಿ ಅಂಗವನ್ನು ಮಹಿಳೆ ಎದುರು ಸ್ಪರ್ಶ ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡಿರುವುದನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಕೃತ್ಯದ ಕುರಿತು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.

ಘಟನೆ ನಂತರ ಮಹಿಳೆ ಇಮೇಲ್‍ ಮುಖಾಂತರ ದೂರು ನೀಡಿದ್ದು, ಈ ಬಗ್ಗೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನೆ ಕುರಿತು ಮೆಟ್ರೋ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿ ಆಂತರಿಕ ತನಿಖೆಯನ್ನು ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಭ್ರದತಾ ಸಿಬ್ಬಂದಿ ಕೆಲ ಅಂಗವೈಕಲ್ಯಗಳನ್ನು ಹೊಂದಿದ್ದು, ಈ ಕಾರಣ ಮಹಿಳೆಗೆ ಅಸಭ್ಯ ವರ್ತನೆ ಎಂದು ತೋರಿರುವ ಸಾಧ್ಯತೆಯಿದೆ. ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News