ಬೆಂಗಳೂರು | ಯುವತಿಗೆ ಕಿರುಕುಳ ಆರೋಪ : ಪೊಲಿಸ್ ಕಾನ್‍ಸ್ಟೇಬಲ್ ಅಮಾನತು
Update: 2024-12-02 15:08 GMT
ಬೆಂಗಳೂರು : ಪಾಸ್ ಪೋರ್ಟ್ ವಿಚಾರಣೆ ನೆಪದಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಪೊಲೀಸ್ ಕಾನ್‍ಸ್ಟೇಬಲ್ ವೊಬ್ಬರನ್ನು ಅಮಾನತು ಮಾಡಲಾಗಿದೆ.
ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಿಳಾ ಟೆಕ್ಕಿಯೊಂದಿಗೆ ಅಸಭ್ಯ ವರ್ತನೆ ತೋರಿದ ಕಾನ್‍ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.
ಇಲ್ಲಿನ ಬಾಪೂಜಿ ನಗರದ ನಿವಾಸಿಯಾಗಿರುವ ಯುವತಿಯೊಬ್ಬರು ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಲು ಇತ್ತೀಚೆಗೆ ಪಾಸ್ ಪೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಪಾಸ್‍ಪೋರ್ಟ್ ವಿಚಾರಣೆಗೆ ಎಂದು ಯುವತಿಯ ಮನೆಗೆ ತೆರಳಿದ್ದ ಬ್ಯಾಟರಾಯನಪುರ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ಕಿರಣ್, ಅಸಭ್ಯ ವರ್ತನೆ ತೋರಿದ್ದ. ಈ ಸಂಬಂಧ ಯುವತಿ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದರು.
ತನಿಖೆ ನಡಿಸಿದ ಬಳಿಕ ಕಾನ್‍ಸ್ಟೇಬಲ್ ಕಿರಣ್‍ನನ್ನು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.