ಕಡಿಮೆ ಬೆಲೆಗೆ ಆಸ್ತಿ ಬರೆದುಕೊಡಲು ಒತ್ತಡ ಆರೋಪ : ಇನ್ಸ್‌ಪೆಕ್ಟರ್ ಸೇರಿ 7 ಮಂದಿ ವಿರುದ್ಧ ಎಫ್‍ಐಆರ್

Update: 2025-04-08 00:04 IST
ಕಡಿಮೆ ಬೆಲೆಗೆ ಆಸ್ತಿ ಬರೆದುಕೊಡಲು ಒತ್ತಡ ಆರೋಪ : ಇನ್ಸ್‌ಪೆಕ್ಟರ್ ಸೇರಿ 7 ಮಂದಿ ವಿರುದ್ಧ ಎಫ್‍ಐಆರ್
  • whatsapp icon

ಬೆಂಗಳೂರು : ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯೆ ಪ್ರವೇಶಿಸಿ ಕಡಿಮೆ ಬೆಲೆಗೆ ಆಸ್ತಿ ಬರೆದುಕೊಡುವಂತೆ ಒತ್ತಡ ಹೇರಿದ್ದ ಆರೋಪದಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎವಿ ಕುಮಾರ್ ಸೇರಿ 7 ಮಂದಿ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಚಿನ್ನೇಗೌಡ ನೀಡಿದ ದೂರು ಆಧರಿಸಿ ಇನ್ಸ್‌ಪೆಕ್ಟರ್ ಎವಿ ಕುಮಾರ್, ಕಾನ್ಸ್‌ ಟೇಬಲ್‍ಗಳಾದ ಉಮೇಶ್, ಅನಂತ್, ಕೃತ್ಯದಲ್ಲಿ ಭಾಗಿಯಾಗಿದ್ದ ಸಿಪಿ ಗವೀಗೌಡ, ದಿವ್ಯ, ಸೋಮಶೇಖರ್ ಆರಾಧ್ಯ ಹಾಗೂ ದಿನೇಶ್ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಚಿನ್ನೇಗೌಡ ಪತ್ನಿ ಸರಕಾರಿ ಉದ್ಯೋಗದಲ್ಲಿದ್ದು, ಈ ಹಿಂದೆ ಅವರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸುವುದಾಗಿ ಮತ್ತು ಅದಕ್ಕೆ ಪ್ರತಿಯಾಗಿ 4 ಕೋಟಿ ಮೌಲ್ಯದ ಮನೆಯನ್ನು ಕಡಿಮೆ ಮೊತ್ತಕ್ಕೆ ಬರೆದುಕೊಡುವಂತೆ ಇನ್ಸ್‌ ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು ಎಂದು ದೂರು ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News