ಬೆಂಗಳೂರು | ಅಕ್ರಮ ಚಿನ್ನ ಸಾಗಾಟ: ಆರೋಪಿ‌ ವಶಕ್ಕೆ

Update: 2024-02-02 13:22 GMT

ಬೆಂಗಳೂರು : ಇಲ್ಲಿನ ದೇವನಹಳ್ಳಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಆರೋಪಿಯಿಂದ 47.89 ಲಕ್ಷ ರೂ. ಮೌಲ್ಯದ 777.5 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಜ.31ರಂದು ಸಿಂಗಾಪುರ ಏರ್‍ಲೈನ್ಸ್ ಸಂಖ್ಯೆ ಎಸ್‍ಕ್ಯೂ-510 ವಿಮಾನದಲ್ಲಿ ಆರೋಪಿಯು ಕೆಐಎಎಲ್‍ಗೆ ಬಂದಿಳಿದಿದ್ದನು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ದೇವನಹಳ್ಳಿಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿರುವುದಾಗಿ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News