ಬೆಂಗಳೂರು | ಲಾರಿ-ಆಟೋ ಢಿಕ್ಕಿ : ಯುವತಿ ಮೃತ್ಯು

Update: 2024-09-28 12:53 GMT

ಬೆಂಗಳೂರು : ಲಾರಿ-ಆಟೋ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಪ್ರಯಾಣಿಕರೊಬ್ಬರು ಮೃತಪಟ್ಟು, ಆಟೋ ಚಾಲಕ ಗಾಯಗೊಂಡಿರುವ ಘಟನೆ ನಗರದ ಕಬ್ಬನ್ ಪಾರ್ಕ್ ಸಮೀಪದ ಕಾಫಿ ಬೋರ್ಡ್ ಸಿಗ್ನಲ್ ಬಳಿ ವರದಿಯಾಗಿದೆ.

ಕೇರಳ ಮೂಲದ ಶಾಲಿನಿ(24) ಎಂಬಾಕೆ ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.

ಶನಿವಾರ ಬೆಳಗಿನ ಜಾವ 4ಗಂಟೆ ಸುಮಾರಿಗೆ ನಗರದ ಬೆನ್ಸನ್ ಟೌನ್‍ನ ಚಿನ್ನಪ್ಪ ಗಾರ್ಡನ್‍ನಿಂದ ಮೆಜೆಸ್ಟಿಕ್ ಕಡೆಗೆ ಆಟೋ ಸಾಗುತ್ತಿತ್ತು. ಈ ವೇಳೆ ಕಾಫಿ ಬೋರ್ಡ್ ಬಳಿ ಲಾರಿ ಚಾಲಕ ಸಿಗ್ನಲ್ ಜಂಪ್ ಮಾಡಿ ಮುಂದೆ ಬಂದ ಪರಿಣಾಮ ಆಟೋಗೆ ಢಿಕ್ಕಿಯಾಗಿದೆ. ಈ ಪರಿಣಾಮ ಆಟೋದಲ್ಲಿದ್ದ ಶಾಲಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ಕಬ್ಬನ್‍ಪಾರ್ಕ್ ಸಂಚಾರಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಲಾರಿ ಢಿಕ್ಕಿಯಿಂದ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News