ಬೆಂಗಳೂರು : 75 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕದ್ದು ಆರೋಪಿ ಪರಾರಿ

Update: 2024-02-24 13:32 GMT

ಬೆಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 75 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕದ್ದು ಪರಾರಿಯಾಗಿರುವ ಘಟನೆ ನಗರದ ಎಂ.ಜಿ.ರಸ್ತೆಯ ಜೋಯಲುಕ್ಕಾಸ್ ಆಭರಣ ಮಳಿಗೆಯಲ್ಲಿ ವರದಿಯಾಗಿದೆ.

ಫೆ.18ರಂದು ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಹಕನ ಸೋಗಿನಲ್ಲಿ ಬಂದಿದ್ದ ಆರೋಪಿ, ಆಭರಣ ನೋಡುವ ನೆಪದಲ್ಲಿ ಸಿಬ್ಬಂದಿಗೆ ತಿಳಿಯದಂತೆ ನಕಲಿ ಉಂಗುರ ಇರಿಸಿ ಅಸಲಿ ವಜ್ರದ ಉಂಗುರವನ್ನು ಕಳವು ಮಾಡಿದ್ದು, ಬಳಿಕ ಆಭರಣ ಹಿಡಿಸದವನಂತೆ ನಿಧಾನವಾಗಿ ಎದ್ದು ತೆರಳಿದ್ದಾನೆ. ಮರುದಿನ ಆಭರಣಗಳನ್ನು ಪರಿಶೀಲಿಸುವಾಗ ನಕಲಿ ಉಂಗುರ ಪತ್ತೆಯಾಗಿತ್ತು. ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಕಳ್ಳತನದ ಕೃತ್ಯ ಬಯಲಾಗಿದೆ.

ಸದ್ಯ ಆಭರಣ ಮಳಿಗೆಯ ಪ್ರತಿನಿಧಿ ನೀಡಿರುವ ದೂರಿನನ್ವಯ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ಅದೇ ಮಾದರಿಯಲ್ಲಿ ನಗರದ ಇನ್ನೂ ಕೆಲವೆಡೆ ಕೃತ್ಯ ಎಸಗಿರುವುದು ತಿಳಿದು ಬಂದಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News