4,800 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ: ಎ.3ರ ವೇಳೆಗೆ ಒಟ್ಟು ಆಸ್ತಿ ತೆರಿಗೆ ಮಾಹಿತಿ ಪ್ರಕಟ

Update: 2025-03-31 22:25 IST
4,800 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ: ಎ.3ರ ವೇಳೆಗೆ ಒಟ್ಟು ಆಸ್ತಿ ತೆರಿಗೆ ಮಾಹಿತಿ ಪ್ರಕಟ
  • whatsapp icon

ಬೆಂಗಳೂರು: 2024-25ನೇ ಹಣಕಾಸು ವರ್ಷದಲ್ಲಿ ಬಿಬಿಎಂಪಿಯ ಎಂಟು ವಲಯಗಳಲ್ಲಿ ಸುಮಾರು 4,800 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ವಾಗಿದ್ದು, ಹಣಕಾಸು ವರ್ಷದ ಕೊನೆಯ ದಿನವಾದ ಸೋಮವಾರದಂದು(ಮಾ.31) ಸಂಗ್ರಹವಾದ ತೆರಿಗೆಯನ್ನು ಎ.3ರಂದು ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.

2024-25ರಲ್ಲಿ ಆಸ್ತಿ ತೆರಿಗೆ ಗುರಿ 5,200 ಕೋಟಿ ರೂ. ಇದೆ. ನಗರದಲ್ಲಿ ಗರಿಷ್ಠ ಆಸ್ತಿ ತೆರಿಗೆಯನ್ನು ಸಂಗ್ರಹಿಸುವ ಅಭಿಯಾನವು ಮಾ.31ರ ಮಧ್ಯರಾತ್ರಿಯವರೆಗೆ ಮುಂದುವರಿಯಲಿದೆ. ಈಗಾಗಲೇ ಬಿಬಿಎಂಪಿ ಸುಮಾರು 4,800 ಕೋಟಿ ರೂ. ಸಂಗ್ರಹಿಸಿದೆ.

ಕೆಲವು ದಿನಗಳಿಂದ ಚೆಕ್‌ಗಳು ಮತ್ತು ಡಿಮ್ಯಾಂಡ್ ಡ್ರಾಫ್ಟ್ (ವಿಶೇಷವಾಗಿ ಸರಕಾರಿ ಬಾಕಿಗಳು) ಮೂಲಕ ತೆರಿಗೆ ಬಾಕಿ ಪಾವತಿಯಾಗುತ್ತಿದ್ದು, ಇವುಗಳನ್ನು ಇನ್ನೂ ಒಟ್ಟಾರೆ ಆಸ್ತಿತೆರಿಗೆ ಸಂಗ್ರಹದಲ್ಲಿ ಸಂಪೂರ್ಣವಾಗಿ ಲೆಕ್ಕಹಾಕಲಾಗಿಲ್ಲ. ಇದನ್ನು ಮಾ.31ರ ನಂತರ ಲೆಕ್ಕ ಹಾಕಲಾಗುತ್ತದೆ. 2024-25 ರ ಹಣಕಾಸು ವರ್ಷದ ಒಟ್ಟು ತೆರಿಗೆ ಸಂಗ್ರಹದ ಸ್ಪಷ್ಟ ಚಿತ್ರಣವು ಎ.3ರ ವೇಳೆಗೆ ಸಿಗಲಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News