ಬೆಂಗಳೂರು: ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮ

Update: 2024-05-24 10:59 GMT

ಬೆಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) 2024ರ ಜೂನ್ 27 ರಿಂದ 29 ರವರೆಗೆ ನಡೆಯಲಿರುವ ಮುಂದಿನ ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮ ಆಯೋಜಿಸಿತ್ತು.

ಈ ಕಾರ್ಯಕ್ರಮವು ಸಂಸ್ಥಾಪಕರು, ಹೂಡಿಕೆದಾರರು, ನಾಯಕರು, ಪಾಲುದಾರರು, ಯುನಿಕಾರ್ನ್ ಗಳು, ಪ್ರಮುಖ ಪ್ರಭಾವಿಗಳು ಮತ್ತು ಉದ್ಯಮಿಗಳನ್ನು ಒಳಗೊಂಡು ಹುಮ್ಮಸ್ಸಿನ ಸ್ಟಾರ್ಟ್ಅಪ್ ಸಮುದಾಯವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ.

ಸ್ಟಾರ್ಟ್ಅಪ್ ಸ್ಫಿಯರ್ 2024 ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಐಸಿಎಐ ಅಧ್ಯಕ್ಷ ಸಿಎ ರಂಜೀತ್ ಕುಮಾರ್ ಅಗರ್ವಾಲ್, “ಭಾರತದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಗಮನಾರ್ಹ ಬೆಳವಣಿಗೆಯನ್ನು ಸಾರಲು ನಾನು ಹೆಮ್ಮೆಪಡುತ್ತೇನೆ. ಭಾರತವು ಈ ಕ್ಷೇತ್ರದಲ್ಲಿ ಈಗ ಜಾಗತಿಕವಾಗಿ ಮೂರನೇ ಅತಿ ದೊಡ್ಡ ದೇಶ ಎಂಬ ಹೆಗ್ಗಳಿಕೆ ಸಾಧಿಸಿದೆ" ಎಂದು ಹೇಳಿದರು.

ಧೀರಜ್ ಕುಮಾರ್, ಪ್ರಮೋದ್ ಆರ್ ಹೆಗ್ಡೆ, ಕವಿತಾ ರಮೇಶ್, ಅಭಯ್ಯ ಕುಮಾರ್, ಕ್ಲೂತಾ ಶ್ರೀನಿವಾಸ್, ಗೀತಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News