ಬೆಂಗಳೂರು ವಿವಿ ನಿವೃತ್ತ ಉಪ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ ನಿಧನ
Update: 2024-11-12 05:17 GMT
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ(83) ಸೋಮವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಕ್ಟೋಬರ್ 11ರಂದು ತಮ್ಮ ಬೆಡ್ ರೂಮ್ ನಲ್ಲಿ ಕಾಲು ಜಾರಿ ಬಿದ್ದಿದ್ದರಿಂದ ಮೆದುಳಿಗೆ ಗಾಯಗೊಂಡಿದ್ದ ಎಂ.ಎಸ್.ತಿಮ್ಮಪ್ಪರನ್ನು ನಗರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ತಡರಾತ್ರಿ 1:50ರ ಸುಮಾರಿಗೆ ಅವರು ಕೊನೆಯುಸಿರೆಳೆದರೆಂದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದ ಎಂ.ಎಸ್.ತಿಮ್ಮಪ್ಪ, ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ಎರಡು ಅವಧಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಹಾಗೂ ಉಪ ಕುಲಪತಿಯೂ ಸೇವೆ ಸಲ್ಲಿಸಿದ್ದರು.
2000ರಲ್ಲಿ ಏಕೈಕ ಪುತ್ರಿಯನ್ನು ಹಾಗೂ 2007ರಲ್ಲಿ ಪತ್ನಿ ಕಳೆದುಕೊಂಡಿದ್ದ ಅವರು, ನಿವೃತ್ತಿಯ ಬಳಿಕ ಒಬ್ಬರೇ ವಾಸವಿದ್ದರು.