ಅಪರಿಚಿತನಿಂದ ಅಸಭ್ಯ ವರ್ತನೆ : ಜಾಲತಾಣದಲ್ಲಿ ಅಳಲು ತೋಡಿಕೊಂಡ ಯುವತಿ
ಬೆಂಗಳೂರು : ಸೆಲ್ಫಿ ವಿಡಿಯೋ ಮಾಡುತ್ತಿದ್ದ ಯುವತಿಯೊಂದಿಗೆ ಅಪರಿಚಿತನೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಇಲ್ಲಿನ ಬಿಟಿಎಂ ಲೇಔಟ್‍ನಲ್ಲಿ ವರದಿಯಾಗಿದೆ.
ನ.5ರ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಅಪರಿಚಿತನ ಕಾಟದಿಂದ ಬೇಸತ್ತ ಯುವತಿ ವಿಡಿಯೋ ಮಾಡುವ ಮೂಲಕ ನಡೆದ ಘಟನೆಯನ್ನು ಇನ್ಸ್ಟಾ ಗ್ರಾಮ್‍ನಲ್ಲಿ ವಿವರಿಸಿ ಕಣ್ಣೀರಿಟ್ಟಿದ್ದಾಳೆ.
ತನ್ನ ಪಾಡಿಗೆ ತಾನು ವಿಡಿಯೋ ಮಾಡುತ್ತಾ ಹೋಗುತ್ತಿದ್ದ ಯುವತಿಯನ್ನು ಸೈಕಲ್‍ನಲ್ಲಿ ಬಂದ ಅಪರಿಚಿತನೊಬ್ಬ ಗಮನಿಸಿ ರೇಗಿಸಿದ್ದಾನೆ. ಬಳಿಕ ಪುನಃ ವಿರುದ್ಧ ದಿಕ್ಕಿನಿಂದ ವಾಪಸ್ ಬಂದು ಆಕೆಯ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ತಕ್ಷಣ ಅಕ್ಕಪಕ್ಕದವರ ಸಹಾಯದಿಂದ ಆರೋಪಿಯನ್ನು ಹಿಡಿದ ಯುವತಿ, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆದರೆ, ಕೆಲವರು ಆರೋಪಿ ಅಪ್ರಾಪ್ತ ಎಂದು ಪರಿಸ್ಥಿತಿ ತಿಳಿಗೊಳಿಸಿ ಕಳುಹಿಸಿದ್ದಾರೆ ಎಂದು ತನಗೆ ಎದುರಾದ ಸನ್ನಿವೇಶದ ಕುರಿತು ಯುವತಿ ಇನ್ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ.
ಘಟನೆಯ ಕುರಿತು ಆಗ್ನೇಯ ವಿಭಾಗದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.